ಗುಂಡ್ಯದ ಗುಡ್ಡದಲ್ಲಿ ಅಡ್ಡಕ್ಕೆ ಬಿದ್ದ ವೇಣೂರಿನ ಹಿಂದೂ ಹುಡುಗಿ ಮತ್ತು ಪುತ್ತೂರಿನ ಮುಸ್ಲಿಂ ಆಟೋ ಚಾಲಕ !! | ಸ್ವ ಧರ್ಮೀಯನ ರಕ್ಷಣೆಗೆ ಧಾವಿಸಿದರಾ ಪ್ರಭಾವಿ ಶಾಸಕ !!??
ನೆಲ್ಯಾಡಿ: ನೆಲ್ಯಾಡಿ ಪೋಲಿಸ್ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಕಾಡಿನಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಸಿಕ್ಕಿ ಬಿದ್ದಿದ್ದಾರೆ. ಅನ್ಯ ಕೋಮಿನ ಜೋಡಿ ಇರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಅನ್ಯಮತೀಯ ಜೋಡಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇದೀಗ ತಾನೆ ನಡೆದಿದೆ.
ಏಪ್ರಿಲ್ 05 ರಂದು ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ಗುಂಡ್ಯಕ್ಕೆ ಆತನದೇ ರಿಕ್ಷಾದಲ್ಲಿ ಜಾಲಿ ಟ್ರಿಪ್ ತೆರಳಿದ್ದಾರೆ. ನಂತರ ಕಾಡಿನ ಮಧ್ಯೆ ಯಾವುದೋ ಸಂಧಾನ ಮಾತುಕತೆಗೆ (!!!) ನಡೆದಿದ್ದಾರೆ. ಅವರಿಬ್ಬರ ಮೀಟಿಂಗ್ ವಿಷಯ ತಿಳಿಯುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಗುಂಪಾಗಿ ಕಾಡಿಗೆ ನುಗ್ಗಿದ್ದಾರೆ. ಅಲ್ಲಿ ಗುಡ್ಡದಲ್ಲಿ ಜೋಡಿ ಪತ್ತೆಯಾಗಿದೆ. ಭಜರಂಗದಳದ ಜಾಗೃತ ಕಾರ್ಯಪಡೆಯ ಎಚ್ಚೆತ್ತು ಜೋಡಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೋಲೀಸರಿಗೆ ಒಪ್ಪಿಸುವ ಮೊದಲು ಇಬ್ಬರಿಗೂ ಸಮಾ ಸೇವೆ ನಡೆದಿದೆ. ಈ ಸುದ್ದಿ ತಿಳಿಯುತ್ತಲೇ ತಮ್ಮ ಸಮುದಾಯದ ಯುವಕನನ್ನು ಬದುಕಿಸುವಲ್ಲಿ ಕೆಲ ರಾಜಕೀಯ ನಾಯಕರು ಪ್ರಯತ್ನ ಪಟ್ಟಿದ್ದಾರೆ ಎನ್ನುವ ಮಾಹಿತಿಯೂ ಹರಿದಾಡಿದೆ.
ಅವರು ಉಳ್ಳಾಲ ಕ್ಷೇತ್ರದ ಶಾಸಕ, ಧರ್ಮ ಸಮನ್ವಯದ ಪ್ರವರ್ತಕ ಯು.ಟಿ ಖಾದರ್ ??! ಎನ್ನುವ ಸುದ್ದಿ ಹರಿದಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾದರ್ ಯುವಕನ ಪರ ನಿಂತಿದ್ದಾರೆ ಮತ್ತು ದೊಡ್ಡ ಇನ್ಫ್ಲುಯೆನ್ಸ್ ನಡೆಸಿದ್ದಾರೆ ಎನ್ನುವ ಸುದ್ದಿ ದೊಡ್ಡದಾಗಿ ಹರಿದಾಡಿದೆ. ಅದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತರು ಶಾಸಕರ ಮೇಲೆ ಕಿಡಿಕಾರಿದ್ದಾರೆ. ನೆಲ್ಯಾಡಿ ಠಾಣೆಯಲ್ಲಿ ಜನ ಜಮಾವಣೆ ನಡೆದಿದೆ. ಇದೀಗ ಬಂದ ಮಾಹಿತಿಯ ಪ್ರಕಾರ, ಜೋಡಿಗಳಿಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.