ಧರ್ಮ ಸಂಘರ್ಷದಲ್ಲಿ ಮಾವಿನಕಾಯಿಗೂ ಅಂಟಿತು ಜಾತಿ !! | ಮಾವಿನ ಸೀಸನ್ ನಲ್ಲಿ ಧರ್ಮ ಅಭಿಯಾನದ ಕಿಚ್ಚು ಹಚ್ಚಿದ ಪೋಸ್ಟರ್ ಗಳು
ಹಿಜಾಬ್ ಸಂಘರ್ಷದಿಂದ ಶುರುವಾದ ಹಿಂದೂ-ಮುಸ್ಲಿಂ ಪೈಪೋಟಿ ಒಂದೊಂದೇ ವಿಷಯಕ್ಕೆ ಮೇಲೇಳುತ್ತಿದೆ. ಹಿಜಾಬ್ ತರಗತಿಗೆ ಹಾಕುವುದು, ದೇವಾಲಯಗಳ ಆವರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ವ್ಯಾಪಾರ ನಿಷೇಧ, ಮಾಂಸಗಳಲ್ಲಿ ಹಲಾಲ್, ಜಟ್ಕಾ ಇಂತಹ ವಿವಾದದ ನಡುವೆ ಇದೀಗ ಮಾವಿನಕಾಯಿಗೂ ಅಂಟಿತು ಜಾತಿ!
ಹೌದು. ಧರ್ಮದ ಹೆಸರಿನಲ್ಲಿ ಮತ್ತೊಂದು ಅಭಿಯಾನ ಶುರುವಾಗಿದ್ದು,ಮಾವಿನಹಣ್ಣಿನ ಮಾರ್ಕೆಟ್ ಹಿಂದುಗಳದ್ದಾಗಿರಬೇಕು ಎಂಬ ಹೊಸ ಅಭಿಯಾನ ಹಾಸನದಲ್ಲಿ ಆರಂಭವಾಗಿದೆ.
ಮಾವಿನ ಸೀಜನ್ ಆರಂಭವಾಗುತ್ತಿದ್ದಂತೆಯೇ ಈ ಹೊಸ ಅಭಿಯಾನದ ಕಿಚ್ಚೆಬ್ಬಿದ್ದು,ಮಾವಿನ ಹಣ್ಣು ಹೋಲ್ ಸೆಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳು ವೈರಲ್ ಆಗುತ್ತಿವೆ. ‘ಮಾವಿನ ಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು. ಹಿಂದೂ ಯುವಕರೇ ಮುಂದೆ ಬನ್ನಿ’ ಎಂದು ಕರೆ ನೀಡಲಾಗಿದೆ. ಹಾಸನದಲ್ಲಿ ಈ ಅಭಿಯಾನ ಪ್ರಾರಂಭ ಆಗಿದೆ. ಇದೀಗ ಕೋಲಾರದಲ್ಲಿ ಕೂಡಾ ಹಿಂದೂ ಮ್ಯಾಂಗೋ ಮಂಡಿ ತೆರೆಯಲು ಕೂಗು ಎದ್ದಿದೆ. ಬೆಳೆ ಬೆಳೆಯುವವರು ಹಿಂದೂಗಳು. ಮಾರುವವರು ಕೂಡಾ ಹಿಂದೂಗಳೇ ಆಗಬೇಕು ಎನ್ನುವುದು ಅಲ್ಲಿನ ಒತ್ತಾಯ. ಈ ಬಗ್ಗೆ ಅದೃಶ್ಯ ಮಾಧ್ಯಮವೊಂದಕ್ಕೆ ಮಾತನಾಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರು, ನಾವು ಹಿಂದೂ ಯುವಕರನ್ನು ಸ್ವದ್ಯೋಗ ದತ್ತ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಎಲ್ಲಾ ತರಕಾರಿ ಅಂಗಡಿಗಳು ಹಣ್ಣು ಅಂಗಡಿಗಳು ಮಂಡಿಗಳು ಮತ್ತಿತರ ವ್ಯಾಪಾರಗಳನ್ನು ಮುಸ್ಲಿಮರು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಅವರು ಹೇಳಿದ್ದೇ ರೇಟು. ಹೀಗಾಗಿ, ಈ ನಿಟ್ಟಿನಲ್ಲಿ ಹಿಂದೂ ಯುವಕರು ಹೆಚ್ಚೆಚ್ಚು ವ್ಯಾಪಾರಕ್ಕೆ ಬರಬೇಕು ಎಂದಿದ್ದಾರೆ. ಮೊನ್ನೆ ಹಿಜಾಬ್ ನಿಮಿತ್ತ ಹೈಕೋರ್ಟ ನೀಡಿದ ತೀರ್ಪನ್ನು ಮುಸ್ಲಿಂರು ಧಿಕ್ಕರಿಸಿ ನಡೆದಿದ್ದಾರೆ. ಸಾಂವಿಧಾನಿಕ ಸಂಸ್ಥೆ ಗಳ ಮಾತಿಗೂ ಮುಸ್ಲಿಂ ಸಮುದಾಯ ಬೆಲೆ ನೀಡುತ್ತಿಲ್ಲ. ಇಂತಹ ಮನಸ್ಸುಗಳಿಗೆ ಬುದ್ದಿ ಕಲಿಸಲೆಬೇಕು. ಆರ್ಥಿಕ ದಿಗ್ಬಂಧನ ಮಾತ್ರ ಇದಕ್ಕೆ ಪರಿಹಾರ. ಹಿಂದೂಗಳೇ ಮುಂದೆ ಬನ್ನಿ. ಮ್ಯಾಂಗೋ ಮಾರೋಣ ” ಎಂಬ ಸ್ಲೋಗನ್ ಸಾಗಿದೆ. ಜಟಕಾ ಕಟ್ ಬರೋಬ್ಬರಿ 7 ಕೋಟಿ ವ್ಯಾಪಾರ ಕುದುರಿಸಿದ ಕಾರಣ ಹಿಂದುತ್ವ ಪ್ರತಿಪಾದಿಸುತ್ತ ಬಂದಿರುವ ನಾಯಕರು ಗೆಲುವಾಗಿದ್ದಾರೆ. ಹಿಂದುತ್ವದ ಹೋರಾಟ ವೇಗ ಹೆಚ್ಚಿಸಿಕೊಂಡು ಮತ್ತೂಂದು ಮಗ್ಗುಲಿಗೆ ಹೊರಳಿದೆ. ಈ