ಹಳೆ ವಾಹನ ಮಾಲೀಕರೇ ಗಮನಿಸಿ : FC ಶುಲ್ಕ ಬರೋಬ್ಬರಿ 16 ಪಟ್ಟು ಹೆಚ್ಚಳ !!!
ಹಳೆ ವಾಹನ ಮಾಲೀಕರೇ ಗಮನಿಸಿ. 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ ಮಾಡಲಾಗಿದೆ.
ಖಾಸಗಿ ವಾಹನಗಳ ಆರ್.ಸಿ. ನವೀಕರಣ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ. ಟ್ರಾರ್ನ್ಸ್ ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ ಎರಡು ವರ್ಷಕ್ಕೆ ಒಂದು ಸಲ ಫಿಟೈಸ್ ಸರ್ಟಿಫಿಕೇಟ್ ಮಾಡಿಸಬೇಕಿದೆ. 8 ವರ್ಷಗಳ ನಂತರ ವರ್ಷಕ್ಕೆ ಒಂದು ಸಲ ಫಿಟೈಸ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ವಾಹನ ಗುಜರಿ ನೀತಿ ಜಾರಿಗೊಳಿಸಲು ಎಫ್.ಸಿ. ಶುಲ್ಕವನ್ನು ಭಾರಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ.