ಆ್ಯಂಕರ್ ಅನುಶ್ರೀಯಿಂದ ತಂದೆಯ ಬಗ್ಗೆ ಬೇಸರದ ಮಾತು !!! ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಏನೆಂದರು ಅನುಶ್ರೀ?

ಅನುಶ್ರೀಯವರ ತಂದೆ ಎಂದು ಸಂಪತ್ ಎಂಬ ವ್ಯಕ್ತಿ ಇತ್ತೀಚೆಗೆ ವೀಡಿಯೋ ಮೂಲಕ ನಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿದ್ದು ಎಲ್ಲಾ ಕಡೆ ವೈರಲ್ ಆಗಿತ್ತು. ಈ ವಿಚಾರವನ್ನ ಶಿವಲಿಂಗೇಗೌಡ ಎಂಬಾತ ಅನುಶ್ರೀಯವರ ಗಮನಕ್ಕೂ ತಂದಿದ್ದಾರೆ.

ಇದೇ ವಿಚಾರವಾಗಿ ಶಿವಲಿಂಗೇಗೌಡರ ವಿರುದ್ಧ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅನುಶ್ರೀಯವರ ತಂದೆ ಎಂದು ಹೇಳುತ್ತಿರುವ ಸಂಪತ್ ಸದ್ಯ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊನೆ ಬಾರಿಗೆ ಮಕ್ಕಳನ್ನು ನೋಡಬೇಕೆಂಬ ಆಸೆಯಿಂದಾಗಿ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಅವರಿಗೆ ಕೆಲಸ ಕೊಟ್ಟ ಮತ್ತು ಆಸ್ಪತ್ರೆ ಸೇರಿಸಿದ ಶಿವಲಿಂಗೇಗೌಡ ಅವರಲ್ಲಿ ಸಂಪತ್ ಅವರು ತಮ್ಮ ಹೆಂಡತಿ, ಮಕ್ಕಳ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅದನ್ನ ಶಿವಲಿಂಗೆಗೌಡ ಅವರು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು.

ಇದೇ ವಿಚಾರಕ್ಕೆ ನಿರೂಪಕಿ ಅನುಶ್ರೀ ಶಿವಲಿಂಗೇಗೌಡ ವಿರುದ್ಧ ಬೇಸರ ಮಾಡಿಕೊಂಡಿದ್ದಾರಂತೆ. ನಿಮಗೂ ಅಕ್ಕ ತಂಗಿ, ಫ್ಯಾಮಿಲಿ ಇದೆ ಅಲ್ವಾ ಸರ್. ಒಂದು ಹೆಣ್ಣಿನ ಬಗ್ಗೆ ಹೀಗೆ ಮಾಧ್ಯಮದಲ್ಲಿ ಹೋಗಿ ಹೇಗೆ ಮಾತಾಡಿದ್ರಿ ಎಂದು ಕೇಳಿದ್ದಾರಂತೆ. ಅಷ್ಟೇ ಅಲ್ಲ ತಮಗೆ ಆಗುತ್ತಿರುವ ಮಾನಸಿಕ ಕಿರಿಕಿರಿ ಬಗ್ಗೆ ದೂರು ನೀಡುವುದಾಗಿಯೂ ಎಚ್ಚರಿಸಿದ್ದಾರಂತೆ.

ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಕುಟುಂಬದಿಂದ ದೂರಾದರೆ ಆ ವ್ಯಕ್ತಿಗೂ ಕುಟುಂಬಕ್ಕೂ ಸಂಬಂಧ ಇಲ್ಲ. ಇನ್ನು 22 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ವ್ಯಕ್ತಿ ಬಗ್ಗೆ ಅದೇಗೆ ಹೋಗಿ ನೀವೂ ಮಾಧ್ಯಮದವರ ಎದುರು ಮಾತನಾಡುತ್ತೀರಿ..? ನೀವೂ ನಮ್ಮನ್ನು ಸಂಪರ್ಕ ಮಾಡಬಹುದಿತ್ತು. ಅಥವಾ ದೂರು ನೀಡಿದ್ದರೆ ಪೊಲೀಸರೇ ಅದನ್ನು ನೋಡಿಕೊಳ್ಳುತ್ತಿದ್ದರು. ಆದರೆ ಕುಟುಂಬದ ವಿರುದ್ಧ ಹೀಗೆ ಸುದ್ದಿ ಮಾಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರಂತೆ.

error: Content is protected !!
Scroll to Top
%d bloggers like this: