ಕೇವಲ 85ರೂಪಾಯಿಗೆ ಇಲ್ಲಿ ಸಿಗುತ್ತೆ ಸುಂದರವಾದ ಮನೆ!!
ಇಂತಹ ದುಬಾರಿ ಕಾಲದಲ್ಲಿ ಏನು ಖರೀದಿಸಬೇಕಾದರೂ ಕಿಸೆಯಲ್ಲಿ ದುಡ್ಡು ಇರಲೇ ಬೇಕು.ಇವಾಗ ಅಂತೂ ದಿನಸಿ ತೆಗೆದುಕೊಳ್ಳುವ ಮುಂಚೆ ಕೂಡ ಒಂದು ಬಾರಿ ಯೋಚನೆ ಮಾಡಲೇ ಬೇಕಾದ ಪರಿಸ್ಥಿತಿ.ಅದರಲ್ಲೂ ಒಂದು ಮನೆ ಕೊಂಡುಕೊಳ್ಳಬೇಕಾದರೆ ಕೇಳೋದೇ ಬೇಡ. ಅಷ್ಟು ದುಬಾರಿ. ಆದ್ರೆ ಇಲ್ಲಿ ಕೇವಲ 85 ರೂಪಾಯಿಗೆ ಸಿಗುತ್ತೆ ಅಂತೆ ಮನೆ!!
ಹೌದು.ಬ್ರಿಟನ್‌ನಲ್ಲಿ ನೆಲೆಸಿರುವ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬ ಇಟಲಿಯ ಸಿಸಿಲಿಯ ಮುಸ್ಸೋಮೆಲಿ ಎಂಬಲ್ಲಿ ಕೇವಲ ಒಂದು ಯೂರೋ ಅಂದ್ರೆ 85 ರೂಪಾಯಿ ಕೊಟ್ಟು ಪುಟ್ಟ ಮನೆಯೊಂದನ್ನು ಖರೀದಿಸಿದ್ದಾನಂತೆ.ಇದೀಗ ಆ ಮನೆಯನ್ನು ಕೊಂಡುಕೊಳ್ಳಲು ಖರೀದಿದಾರರ ಸಾಲೇ ಇದೆಯಂತೆ.
ಕೆಲವು ದೇಶಗಳಲ್ಲಿ, ಸ್ಥಳೀಯ ಆಡಳಿತವು ಕೆಲವು ಷರತ್ತುಗಳೊಂದಿಗೆ ಹಳೆಯ ಮನೆಗಳನ್ನು ಒಂದು ಡಾಲರ್ ಅಥವಾ ಒಂದು ಯೂರೋಗೆ ಮಾರಾಟ ಮಾಡುವ ಯೋಜನೆಯನ್ನು ಪರಿಚಯಿಸಿದೆ.ಇದೇ ಷರತ್ತು ಕಡಿಮೆ ಬೆಲೆಯಲ್ಲಿ ಮನೆ ಮಾರಾಟ ಮಾಡಲು ಕಾರಣ.
ಡ್ಯಾನಿ ಮೆಕ್‌ಕಬ್ಬಿನ್ ಎಂಬಾತ ಸಿಸಿಲಿಯ ಕ್ಯಾಲ್ಟಾನಿಸೆಟ್ಟಾ ಪ್ರಾಂತ್ಯದಲ್ಲಿರುವ ಮುಸೊಮೆಲಿ ಪಟ್ಟಣದಲ್ಲಿ ಮನೆಯನ್ನು ಖರೀದಿಸಿದ್ದರು.ಷರತ್ತಿನ ಪ್ರಕಾರ ಆ ಹಳೆಯ ಮನೆಯನ್ನು ಆತ ಮೂರು ವರ್ಷಗಳೊಳಗೆ ನವೀಕರಣ ಮಾಡಬೇಕಿತ್ತು. ಆದ್ರೆ ಈ ಮನೆ ಕೊಳ್ಳುವ ಮುನ್ನ ಡ್ಯಾನಿ 17 ವರ್ಷಗಳ ಕಾಲ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ. ಹೀಗಾಗಿ ಇಟಲಿಯಲ್ಲಿ ಕಾರ್ಮಿಕರ ಕೊರತೆ ಕಾಡಿದ ಕಾರಣ ಮನೆ ಖರೀದಿಸಿ ವರ್ಷ ಕಳೆದರೂ ನವೀಕರಿಸಲು ಸಾಧ್ಯವಾಗಲಿಲ್ಲ.ಮನೆ ನವೀಕರಣ ಮಾಡಲು ಬಿಲ್ಡರ್‌ಗಳು ಸಿಗದೇ ಇದ್ದಿದ್ದರಿಂದ,ಡ್ಯಾನಿ ಷರತ್ತಿನ ಪ್ರಕಾರ ಒಂದು ಯುರೋಗೆ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು.
ಕೇವಲ 85 ರೂಪಾಯಿಗೆ ಸಿಗುವ ಆ ಮನೆಯನ್ನು ಯಾರು ಬಿಡುತ್ತಾರೆ ಹೇಳಿ, ಅದರ ಖರೀದಿಗೆ ಜನ ಸಾಗರವೇ ಬಂದಿತ್ತು. ಪ್ರಸ್ತುತ, ಈ ಸ್ಥಳದಲ್ಲಿ ವಿದೇಶಿಯರು ನೆಲೆಸಲು ‘ಕೇಸ್ 1 ಯುರೋ’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, ಮೆಕ್‌ಕ್ಯೂಬಿನ್ ಅವರು ಒಂದು ಯೂರೋ ಅಂದರೆ ಸುಮಾರು 85 ರೂಪಾಯಿಗೆ ಇಲ್ಲಿ ಮನೆಯನ್ನು ಖರೀದಿಸಿದರು.