ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತಕ್ಕೊಳಗಾದ ಕಾರು | ಬಿಜೆಪಿ ಮುಖಂಡನ ಕಾಲು ತುಂಡು| ಇಬ್ಬರ ಸ್ಥಿತಿ ಚಿಂತಾಜನಕ

0 14

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಭೀಕರವಾಗಿ ಅಪಘಾತಕ್ಕೊಳಗಾಗಿದ್ದು, ಬಿಜೆಪಿ ಮುಖಂಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಕಲಬುರಗಿಯ ಹೊರವಲಯದ ಶಹಬಾದ ರಸ್ತೆಯಲ್ಲಿ ನಡೆದಿದೆ.

ಶಹಬಾದ ರಸ್ತೆಯ ಕೇಂಬ್ರಿಡ್ಜ್ ಶಾಲೆಯ ಬಳಿ ಈ ಅಪಘಾತ ಸಂಭವಿಸಿದ್ದು, ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಮುಖಂಡ ವೀರೇಂದ್ರ ಪಾಟೀಲ್ ರಾಯಕೋಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಐವರೂ ಕಲಬುರಗಿಯ ಜಗತ್ ಬಡಾವಣೆಯ ನಿವಾಸಿಗಳು.

ವೀರೇಂದ್ರ ಪಾಟೀಲ್ ಕಾಲು ತುಂಡಾಗಿದ್ದರೆ, ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Leave A Reply