ನಿನ್ನೆ ರಾತ್ರಿ ಬಾಹ್ಯಾಕಾಶದಲ್ಲಿ ಉಲ್ಕಾಪಾತ
ಉಲ್ಕಾಪಾತ ಮಳೆಯಂತೆ ಗೋಚರಿಸುವ ಬೆಳಕಿನ ದೃಶ್ಯಗಳು ಸೆರೆಯಾಗಿರುವ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.
ಮಹಾರಾಷ್ಟ್ರದ ನಾಗ್ಪುರದ ಕೆಲವು ಪ್ರದೇಶಗಳು ಮತ್ತು ಮಧ್ಯಪ್ರದೇಶದ ಝಬುವಾ, ಬರ್ವಾನಿ ಜಿಲ್ಲೆಗಳಲ್ಲಿ ಉಲ್ಕಾಪಾತದ ದೃಶ್ಯ ಕಂಡುಬಂದಿದೆ.
1862ರಲ್ಲಿ ಲೂಯಿಸ್ ಸ್ವಿಪ್ಟ್ ಮತ್ತು ಹೊರೆಸ್ ಪಾರ್ನೆಲ್ ಟಟಲ್ ಕಂಡುಹಿಡಿದ ಧೂಮಕೇತು ಉರಿದು ಉಳಿದ ಅವಶೇಷಗಳು ಈಗಲೂ ಉಲ್ಕಾಪಾತಕ್ಕೆ ಕಾರಣವಾಗುತ್ತಿವೆ. ಉಜ್ಜಯಿನಿಯ 300 ವರ್ಷಗಳಷ್ಟು ಹಳೆಯದಾದ ಜಿವಾಜಿ ವೀಕ್ಷಣಾಲಯದ ಅಧೀಕ್ಷಕ ರಾಜೇಂದ್ರ ಗುಪ್ತಾ, ಇದು ಉಲ್ಕಾಪಿಂಡ್(ಉಲ್ಕಾಶಿಲೆಗಳು) ಎಂದು ತೋರುತ್ತದೆ. ಅವುಗಳ ಪತನ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ
ಸಾಮಾನ್ಯವಾಗಿ ‘ಶೂಟಿಂಗ್ ಸ್ಟಾರ್ಸ್’ ಎಂದು ಕರೆಯಲ್ಪಡುವ ಉಲ್ಕೆಗಳು ಕಲ್ಲಿನ ವಸ್ತುಗಳಾಗಿವೆ, ಅವು ಭೂಮಿಯ ವಾತಾವರಣವನ್ನು ಪ್ರಚಂಡ ವೇಗದಲ್ಲಿ ಪ್ರವೇಶಿಸುತ್ತವೆ. ಸೆಕೆಂಡಿಗೆ 30 ರಿಂದ 60 ಕಿಮೀ ನಡುವೆ ಸಂಚರಿಸುವ ಇವನ್ನು ಉಲ್ಕಾಪಾತ ಎಂದು ಕರೆಯಲಾಗುತ್ತದೆ. ಇವು ಬೆಳಕಿನ ಗೆರೆಗಳ ಮಳೆಯನ್ನು ಉಂಟುಮಾಡುತ್ತವೆ.