ಪುತ್ತೂರು : ರಿಕ್ಷಾ – ಬೊಲೇರೋ ಮಧ್ಯೆ ಭೀಕರ ಅಪಘಾತ | ಮೂವರಿಗೆ ಗಂಭೀರ ಗಾಯ!

ಪುತ್ತೂರು : ರಿಕ್ಷಾ ಮತ್ತು ಬೊಲೇರೋ ನಡುವೆ ಎ.3 ರಂದು ರಾತ್ರಿ ಅಪಘಾತ ನಡೆದಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

 

ಪುತ್ತೂರಿನ ದರ್ಬೆ ಅಶ್ವಿನಿ ಹೋಟೆಲ್ ನ ಸಮೀಪ ಈ ಅಪಘಾತ ಸಂಭವಿಸಿದೆ.

ಪುತ್ತೂರಿನಿಂದ ಸಂಟ್ಯಾರ್ ಕಡೆ ಹೋಗುತ್ತಿದ್ದ ರಿಕ್ಷಾ ಹಾಗೂ ಪುತ್ತೂರಿಗೆ ಬರುತ್ತಿದ್ದ ಬೊಲೇರೋ ನಡುವೆ ಈ ಅಪಘಾತ ಸಂಭವಿಸಿದೆ.

ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ಇಬ್ಬರು ಹಾಗೂ ಬೊಲೇರೋದಲ್ಲಿದ್ದ ಓರ್ವನಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Leave A Reply

Your email address will not be published.