ಬೇಸಿಗೆಯಲ್ಲಿ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತಿದೆಯೇ!?|ಈ ಟಿಪ್ಸ್ ಬಳಸಿದರೆ ಅರ್ಧದಷ್ಟು ಇಳಿಸಬಹುದು ಖರ್ಚು!
ಬೇಸಿಗೆ ಬಂತೆಂದರೆ ಸಾಕು ಬಿಸಿಲ ಧಗೆಗೆ ಬೇಸತ್ತು ಹೋಗುತ್ತೇವೆ. ಹಾಗಾಗಿ ಹೆಚ್ಚಿನವರು ಇರೋದೇ ಫ್ಯಾನ್ ಅಡಿಯಲ್ಲಿ.ಹೀಗೆ ಬೇಸಿಗೆ ಬಂತೆಂದರೆ ಮನೆಯಲ್ಲಿ ಫ್ಯಾನ್, ಫ್ರಿಡ್ಜ್, ಎಸಿ, ಏರ್ ಕೂಲರ್ ನಂತಹ ತಂಪಾದ ಉಪಕರಣಗಳ ಬಳಕೆ ಹೆಚ್ಚುತ್ತದೆ.ಇಂತಹ ಸಂದರ್ಭದಲ್ಲಿ ಹೆಚ್ಚಿನವರ ಚಿಂತೆಯೇ ವಿದ್ಯುತ್ ಬಿಲ್!
ಹೌದು. ಅತಿಯಾದ ವಿದ್ಯುತ್ ಬಿಲ್ ನಿಂದ ಅನೇಕರು ಬೇಸತ್ತಿದ್ದೂ, ಬಿಲ್ ಕಡಿಮೆ ಮಾಡುವಲ್ಲಿ ಎಲ್ಲರೂ ಯೋಚನೆಮಾಡುತ್ತಿದ್ದಾರೆ.ಇಂತವರಿಗೆ ಇಲ್ಲಿದೆ ಒಂದು ಟಿಪ್ಸ್.
ವಿಶೇಷವಾಗಿ AC ಹೆಚ್ಚಿನ ವಿದ್ಯುತ್ ಅನ್ನು ಹೀರಿಕೊಳ್ಳುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ಆದರೆ ಈ ಸಮಯದಲ್ಲಿ AC ಅನ್ನು16 ಡಿಗ್ರಿಯ ಬದಲು 24 ಡಿಗ್ರಿಯಲ್ಲಿ ಹಾಕಿದರೆ ನಿಮಗೆ ಬೇಕಾದ ಕೂಲಿಂಗ್ ಸಿಗುತ್ತದೆ. ಅದೇ ಸಮಯದಲ್ಲಿ ವಿದ್ಯುತ್ ಬಿಲ್ ಕೂಡ ಕಡಿಮೆಯಾಗುತ್ತದೆ
ಮನೆಯಲ್ಲಿ ವಿವಿಧ ಬಲ್ಬ್ಗಳನ್ನು ಬಳಸುತ್ತಿರಬಹುದು. ಆದರೆ, ಅವೆಲ್ಲಕ್ಕಿಂತ LED ಬಲ್ಬ್ ಗಳು ಬಳಕೆ ಉತ್ತಮಾಗಿರುತ್ತದೆ. ಇತರೆ ಬಲ್ಬ್ ಗಳಿಗಿಂತ ಶೇ.90ರಷ್ಟು ಕಡಿಮೆ ವಿದ್ಯುತ್ ನ್ನು ಇದು ಬಳಸುತ್ತದೆ. ಆದ್ದರಿಂದ ಮನೆಯ LED ಬಲ್ಬ್‌ಗಳ ಬಳಕೆಗೆ ಆದ್ಯತೆ ನೀಡಿ.
ಹೆಚ್ಚಾಗಿ ನಾವು ಟಿವಿ ಅನ್ನು ರಿಮೋಟ್ನಲ್ಲಿ ಆಫ್ ಮಾಡುತ್ತೇವೆ, ಅಂತೆಯೇ ಮೊಬೈಲ್ ಚಾರ್ಜರ್ ಅನ್ನು ಸಹ ಫೊನ್ ಚಾರ್ಜ್ ಆದ ಬಳಿಕೆ ಸ್ವಿಚ್ ತೆಗೆಯದೆನೇ ಹಾಗೆಯೇ ಬಿಟ್ಟಿರುತ್ತೇವೆ. ಇದರಿಮದ ಸ್ವಲ್ಪ ಪ್ರಮಾಣದ ವಿದ್ಯುತ್ ಬಿಲ್ ಹೆಚ್ಚಳವಾಗುವ ಸಾಧ್ಯತೆಗಳಿರುತ್ತದೆ. ಆದರೆ ಇವುಗಳನ್ನು ಸರಿಯಾದ ರೀತಿಯಲ್ಲಿ ಆಫ್ ಮಾಡಿದ್ದಲ್ಲಿ ವಿದ್ಯುತ್ ಬಿಲ್‌ನ ಶೇಕಡಾ 5ರಷ್ಟು ಉಳಿಸಬಹುದಾಗಿದೆ.
ನಿಮ್ಮ AC ಯುನಿಟ್ ನೆರಳಿನಲ್ಲಿ ಇರಬೇಕು: ಹೊರಾಂಗಣ AC ಹೊರಾಂಗಣ ಘಟಕವು ನೇರ ಸೂರ್ಯನ ಬೆಳಕಿನಲ್ಲಿದ್ದರೆ ಸ್ವಲ್ಪ ಹೆಚ್ಚು ವಿದ್ಯುತ್ ಬಳಸುತ್ತದೆ. ನೆರಳು ನೀಡಲು ಸುತ್ತಲೂ ಮರವನ್ನು ಬೆಳೆಸಿದರೆ ಸ್ವಲ್ಪ ಲಾಭವಿದ್ದು, ಬಿಲ್ ಸಹ ಕಡಿಮೆ ಬರುತ್ತದೆ.
ಸ್ವಯಂಚಾಲಿತ ಹೀಟ್ ಕಟ್ ಆಫ್ ವೈಶಿಷ್ಟ್ಯವನ್ನು ಹೊಂದಿರುವ ಐರನ್ ಬಾಕ್ಸ್ ಅನ್ನು ಖರೀದಿಸಿದರೆ, ನೀವು ವಿದ್ಯುತ್ ಬಿಲ್‌ನಲ್ಲಿ ಸ್ವಲ್ಪ ಉಳಿಸಬಹುದು. ಬಟ್ಟೆಗಳು ಒಣಗಿದ ಮೇಲೆ ಇಸ್ತ್ರಿ ಮಾಡಿದರೆ ಉತ್ತಮ ರೀತಿಯಲ್ಲಿ ಇಸ್ತ್ರಿಯಾಗುತ್ತದೆ ಮತ್ತು ಈ ಮೂಲಕ ವಿದ್ಯುತ್ ಉಳಿತಾಯವಾಗುತ್ತದೆ.
ಫ್ರಿಡ್ಜ್ ಇಡುವ ಜಾಗದಲ್ಲಿ ಚನ್ನಾಗಿ ಗಾಳಿ ಆಡುತ್ತಿದ್ದರೆ ಬೇಗ ಫ್ರಿಡ್ಜ್ ತಂಪಾಗುತ್ತದೆ. ಇದರಿಂದ ವಿದ್ಯುತ್ ಬಳಕೆ ಕಡಿಮೆ ಸಾಕಾಗುತ್ತದೆ. ಹಾಗಾಗಿ ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಫ್ರಿಡ್ಜ್ ಇರಿಸಿ.