ಪ್ರೀತಿ ಮಾಯೆ ಹುಷಾರು | ಪ್ರೀತಿಗಾಗಿ ದೇಹವನ್ನೇ ಒಪ್ಪಿಸಿದ ಪ್ರೇಯಸಿಗೆ, ಪ್ರಿಯಕರನ ಬರ್ತ್ ಡೇಯಂದು ಕಾದಿತ್ತು ಶಾಕಿಂಗ್ ನ್ಯೂಸ್ !!!

ಪ್ರೀತಿ ಒಂದು ಮಾಯೆ ಹುಷಾರು ಎಂಬ ಮಾತಿದೆ. ಇದರಲ್ಲಿ ಬಿದ್ದವರು ಮೇಲೇಳುವುದು ಕಷ್ಟ. ಹಾಗೆನೇ ಕೆಲವರಿಗೆ ನಿಜವಾದ ಪ್ರೀತಿ ಸಿಕ್ಕರೆ ಕೆಲವರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ. ಇಂಥದ್ದೇ ಒಂದು ಘಟನೆಯಲ್ಲಿ ಪ್ರೀತಿಯ ಮಾಯೆಯಲ್ಲಿ ಬಿದ್ದವಳು ಈಗ ಅದರ ಆಘಾತ ತಡೆದುಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

 

ಈ ಮನಕಲಕುವ ಘಟನೆ ನಡೆದಿರುವುದು ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ.

ಪ್ರೀತಿಯ ಬಲೆಗೆ ಬಿದ್ದು ತನ್ನ ದೇಹವನ್ನು ಪ್ರಿಯಕರನಿಗೆ ಒಪ್ಪಿಸಿದ ಯುವತಿ ಇಂದು ಆತನಿಂದ ಮೋಸ ಹೋಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ.

ಕಂದೇಗಾಲ ಗ್ರಾಮದ ಪ್ರಭುಸ್ವಾಮಿ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ.

ಈ ಯುವತಿ ಯುವಕ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ನಂತರ ಆತನಿಂದ ಮೋಸ ಹೋದ ಯುವತಿ ಪ್ರಿಯಕರನ ಹುಟ್ಟಿದ ಹಬ್ಬದಂದೇ ವಿಷ ಸೇವಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಿಯಕರ ಪ್ರಭುಸ್ವಾಮಿ ಬರ್ತಡೇ ಆಚರಣೆಗೆಂದು ಪ್ರೇಯಸಿಯನ್ನೂ ಆಹ್ವಾನಿಸಿದ್ದ. ಈ ವೇಳೆ ಯುವತಿ ಮದುವೆ ಪ್ರಸ್ತಾಪ ಮಾಡಿದ್ದಳು. ಆದರೆ, ಪ್ರಭು ಸ್ನೇಹಿತರ ಎದುರೇ ಯುವತಿಯ ಕಪಾಳಕ್ಕೆ ಹೊಡೆದು ಅವಮಾನಿಸಿದ್ದ.
ಮೂರು ದಿನಗಳ ಬಳಿಕ ಪ್ರಭುಸ್ವಾಮಿ ಮನೆಗೆ ಆಗಮಿಸಿ ಪ್ರಿಯಕರನ ತಾಯಿ ಮುಂದೆ ಪ್ರೀತಿ ವಿಚಾರವನ್ನು ಯುವತಿ ಹೇಳಿದ್ದಳು.

ಕಳೆದ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮೂರು ದಿನಗಳ ಹಿಂದೆ ಸ್ನೇಹಿತರೊಂದಿಗೆ ಹುಟ್ಟು ಹಬ್ಬದಂದು ಕಪಾಳಕ್ಕೆ ಹೊಡೆದು ಅಪಮಾನ ಮಾಡಿದ್ದಾನೆ ಎಂದು ಆರೋಪಿಸಿ, ಪ್ರಿಯತಮನ ಕುಟುಂಬಸ್ಥರ ಎದುರೇ ವಿಷ ಸೇವನೆ ಮಾಡಿದ್ದಾಳೆ.

ಈ ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವತಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Leave A Reply

Your email address will not be published.