ಮಂಗಳೂರು : ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ!

Share the Article

ಮಂಗಳೂರು: ನಗರದ ಬೊಕ್ಕಪಟ್ಣ ಬಳಿಯ ಮಠದಕಣಿ ಬಳಿ ಗುಜರಿ ಅಂಗಡಿಯೊಂದರಲ್ಲಿ ಇಂದು ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ.

ಇಮ್ರಾನ್ ಮಠದ ಕಣಿ ಎಂಬವರಿಗೆ ಸೇರಿದ ಗುಜರಿ ಅಂಗಡಿ ಇದಾಗಿದ್ದು, ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ.
ಈ ಘಟನೆ ಸಂಭವಿಸಿದಾಗ ಅಂಗಡಿಯಲ್ಲಿ ಯಾರು ಇರಲಿಲ್ಲ ಹಾಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಕಿಯ ಕೆನ್ನಾಲಗೆ ಪರಿಸುತ್ತಿದ್ದಂತೆ ಸ್ಥಳೀಯರು ನೀರು ಸಿಂಪಡಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಜೊತೆಗೆ ಅಗ್ನಿಶಾಮಕ ದಳದ ಅಧಿಕಾರಿ ರಾಜ ಅವರ ತಂಡವೂ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದೆ.

Leave A Reply