ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕರಡಿಯನ್ನು ಕಾವಲಿಗೆ ನಿಲ್ಲಿಸಿದ ರೈತ!!|ಅಷ್ಟೇ ಅಲ್ಲದೆ ಈ ಸ್ಪೆಷಲ್ ವಾಚ್ ಮ್ಯಾನ್ ಗೆ ಸಂಬಳ ಬೇರೆ ಇದೆಯಂತೆ| ಈ ವಿಸ್ಮಯಕಾರಿ ವೀಡಿಯೋ ಫುಲ್ ವೈರಲ್

ಇತ್ತೀಚಿಗೆ ಕಾಡು ಪ್ರಾಣಿಗಳು ನಾಡಿಗಿಳಿದು ರೈತರಿಗೆ ತೊಂದರೆ ಕೊಡುವುದು ಮಾಮೂಲಾಗಿದೆ. ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ತೆಲಂಗಾಣದ ರೈತರೊಬ್ಬರು ಅತ್ಯಂತ ಅದ್ಭುತವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಈ ರೈತನ ಹೊಲದಲ್ಲಿ ಬೆಳೆಯುವ ಬೆಳೆಗೆ ಕರಡಿ ಕಾವಲು ಕಾಯುತ್ತದೆ.

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ರೈತ ಮಂಗಗಳು ಮತ್ತು ಕಾಡುಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ದಿನವಿಡೀ ಹೊಲದಲ್ಲಿ ಕುಳಿತು ಬೆಳೆಗಳಿಗೆ ಕಾವಲು ನೀಡುವುದು ಸಾಧ್ಯವಾಗದ ಮಾತು. ಈ ಹಿನ್ನೆಲೆಯಲ್ಲಿ ಅವರು ವಿಶೇಷ ಮಾರ್ಗವನ್ನು ಕಂಡುಕೊಂಡಿದ್ದಾರೆ.


Ad Widget

Ad Widget

Ad Widget

ಭಾಸ್ಕರ್ ರೆಡ್ಡಿ ಅವರು ತಮ್ಮ ಬೆಳೆಗಳನ್ನು ಕಾಯಲು ಕರಡಿಯನ್ನು ಬಾಡಿಗೆಗೆ ಪಡೆದಿದ್ದಾರೆ. ಅಷ್ಟೇ ಅಲ್ಲ ಈ ‘ಕರಡಿ’ಗೆ ದಿನಗೂಲಿ 500 ರೂ. ಎಂದು ನಿಗದಿ ಮಾಡಿದ್ದಾರೆ. ಈಗ ಮಂಗಗಳು ಮತ್ತು ಕಾಡುಹಂದಿಗಳು ಅವನ ಹೊಲದ ಸುತ್ತಲೂ ಸುಳಿಯುವುದಿಲ್ಲ. ಈ ಕರಡಿ ದಿನವಿಡೀ ರೈತನ ಹೊಲಗಳಲ್ಲಿ ಸುತ್ತಾಡುತ್ತಾ ಅವನ ಬೆಳೆಗಳನ್ನು ಕಾಪಾಡುತ್ತದೆ. ಕರಡಿಯನ್ನು ದೂರದಿಂದ ನೋಡಿದ ಮಂಗ ಮತ್ತು ಕಾಡುಹಂದಿ ಅಲ್ಲಿಂದ ಓಡಿಹೋಗುತ್ತವೆ.

ವರದಿಯ ಪ್ರಕಾರ, ರೈತ ಭಾಸ್ಕರ್ ರೆಡ್ಡಿ, ತನ್ನ ಹೊಲವನ್ನು ಕಾವಲು ಕಾಯಲು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ಆ ವ್ಯಕ್ತಿ ಕರಡಿ ವೇಷವನ್ನು ಧರಿಸಿ ಹೊಲದ ಬೆಳೆಗೆ ಕಾವಲಾಗುತ್ತಾರೆ. ಭಾಸ್ಕರ್ ಅವರ ಈ ಕಲ್ಪನೆಯು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ತಂತ್ರವನ್ನು ಅಳವಡಿಸಿಕೊಂಡ ನಂತರ ಮಂಗಗಳು ಮತ್ತು ಕಾಡುಹಂದಿಗಳಿಂದ ಬೆಳೆಗಳನ್ನು ರಕ್ಷಿಸುವುದು ಸುಲಭವಾಗಿದೆ ಎನ್ನಲಾಗಿದೆ. ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಇದರ ವೀಡಿಯೋವನ್ನು ಅಪ್‌ಲೋಡ್ ಮಾಡಿಲಾಗಿದ್ದು, ಅದೀಗ ಎಲ್ಲೆಡೆ ವೈರಲ್ ಆಗಿದೆ.

Leave a Reply

error: Content is protected !!
Scroll to Top
%d bloggers like this: