ಎರಡು ವರ್ಷದ ಅಮೂಲ್ಯ ಪ್ರೀತಿ ಕೊನೆಗೂ ಒಂದಾಯಿತು!! ಹೆತ್ತವರ ವಿರೋಧದ ನಡುವೆಯೂ ವಿವಾಹವಾದ ಜೋಡಿ ಮೊದಲು ತೆರಳಿದ್ದು ಎಲ್ಲಿಗೆ!??

Share the Article

ಹೆತ್ತವರ ಒಪ್ಪಿಗೆ ಸಿಗದೇ ಪ್ರೀತಿಸಿದ್ದ ಜೋಡಿಯೊಂದು ಮದುವೆಯಾಗಿದ್ದು ಸದ್ಯ ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ವಧುವಿನ ಕಡೆಯವರಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಕ್ಷಣೆ ಕೋರಲಾಗಿದೆ.

ವಿವರ:
ಯೋಗಾನಂದ್ ಎನ್ನುವ ಯುವಕನೊಬ್ಬ ಚಂದನ ಎನ್ನುವ ಯುವತಿಯನ್ನು ಪ್ರೀತಿಸಿದ್ದು ಇಬ್ಬರದ್ದೂ ಎರಡು ವರ್ಷದ ಪ್ರೀತಿಯಾಗಿತ್ತು.ಈ ಹಿನ್ನೆಲೆಯಲ್ಲಿ ಮನೆಯವರಲ್ಲಿ ವಿಷಯ ಪ್ರಸ್ತಾಪಿಸಿದಾಗ ಹುಡುಗಿ ಮನೆಯವರು ವಿರೋಧ ಒಡ್ಡಿದ್ದು,ಇನ್ನೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ನಡೆಸಿ ಯುವತಿಯನ್ನು ಅಜ್ಞಾತ ಸ್ಥಳದಲ್ಲಿರಿಸಿದ್ದರು.ಇತ್ತ ಯುವಕ ಇದೆಲ್ಲದರಿಂದ ಕಂಗಾಲಾಗಿ ಕೊನೆಗೂ ಯುವತಿಯನ್ನು ಪತ್ತೆ ಹಚ್ಚಿದ್ದು,ಮನೆಯವರಿಗೆ ತಿಳಿಯದಂತೆ ಓಡಿ ಹೋಗಿ ಮದುವೆಯಾಗಿದ್ದಾರೆ.

ಅತ್ತ ಯುವತಿ ಮದುವೆಯಾದ ಸುದ್ದಿ ತಿಳಿದ ಮನೆಯವರು ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು,ಈ ಹಿನ್ನೆಲೆಯಲ್ಲಿ ಮದುವೆಯಾದ ಕೆಲ ನಿಮಿಷದಲ್ಲೇ ಪೊಲೀಸ್ ಅಧಿಕ್ಷಕರ ಕಚೇರಿಯ ಮೆಟ್ಟಿಲು ಹತ್ತಿದ ಜೋಡಿಯು ರಕ್ಷಣೆಗಾಗಿ ಅಂಗಾಲಾಚಿದ್ದು ಹೆತ್ತವರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply