ಮುಂಜಾನೆ ಚಹಾದೊಂದಿಗೆ ಬಿಸ್ಕೇಟ್ ತಿನ್ನುತ್ತೀರಾ!?? ಹಾಗಾದರೆ ಇಂದೇ ನಿಯಂತ್ರಿಸಿ, ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಮುಂಜಾನೆಯ ಪ್ರಶಾಂತ ವಾತಾವರಣದಲ್ಲಿ ಅರೆನಿದ್ರೇಯಲ್ಲೇ ಮುಖಕ್ಕೆ ತಂಪನೆಯ ನೀರೆರೆದುಕೊಂಡು ಬಿಸಿ ಬಿಸಿ ಚಹಾದೊಂದಿಗೆ ಒಂದರ್ಧ ಪ್ಯಾಕೆಟ್ ಬಿಸ್ಕೆಟ್ ಹಿಡಿಡು ಜಗಲಿಯಲ್ಲಿ ಕೂತರೆ ಆ ಖುಷಿಗೆ ಪಾರವೇ ಇರದು. ಹೌದು, ಇತ್ತೀಚಿನ ಹೆಚ್ಚಿನ ಜನ ಇದೇ ರೀತಿಯ ದಿನಚರಿ ಹೊಂದಿದ್ದು ಚಹಾದೊಂದಿಗೆ ಬಿಸ್ಕಟ್ ತಿನ್ನುತ್ತಾರೆ. ಅಂತಹ ಜನರಿಗೆ ಇಲ್ಲಿದೆ ಬೇಸರದ ಜೊತೆಗೆ ಕಾಳಜಿಯ ಸುದ್ದಿ.
ಟೀ ಜೊತೆಗೆ ದೀರ್ಘಕಾಲ ಬಿಸ್ಕಟ್ ಸೇವಿಸುತ್ತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಮೀಕ್ಷೆಗಳು ಹೇಳಿವೆ. ನೀವು ತಿನ್ನುವ ಬಿಸ್ಕಟ್ ನಲ್ಲಿ ಹೈಡ್ರೋಜನೀಕರಿಸಿದ ಕೊಬ್ಬು ಇದ್ದು, ಮಾನವನ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅದಲ್ಲದೇ ಬಿಸ್ಕಟ್ ನಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದು, ಅತ್ತ ಚಹಾದಲ್ಲೂ ಸಕ್ಕರೆ ಇರುವುದರಿಂದ ಬಹುವೇಗದಲ್ಲಿ ಮಾನವನ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹೆಚ್ಚಾಗಿ ಸಂಸ್ಕರಿಸಿದ ಹಿಟ್ಟಿನಿಂದ ಇವುಗಳನ್ನು ತಯಾರಿಸಲಾಗುತ್ತಿದ್ದು, ಅತಿಯಾಗಿ ಸೇವಿಸಿದರೆ ಮಲಬದ್ಧತೆ, ಹಲ್ಲಿನಲ್ಲಿ ಹುಳುಕು ಮುಂತಾದ ಗಂಭೀರ ಪರಿಣಾಮ ದೇಹದ ಮೇಲೆ ಬೀಳುತ್ತದೆ. ಆಜೀರ್ಣ, ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚುವುದು, ರೋಗ ನಿರೋಧಕ ಶಕ್ತಿ ಕುಂದುವುದು, ಹೀಗೆ ಹತ್ತು ಹಲವು ರೀತಿಯಲ್ಲಿ ಆರೋಗ್ಯದಲ್ಲಿ ಏರುಪೇರಾಗುವಂತೆ ಮಾಡುವ ಬಿಸ್ಕಟ್ ಗಳನ್ನು ಚಹಾದೊಂದಿಗೆ ಸೇವಿಸುವುದು ನಿಯಮಿತವಾಗಿರಲಿ ಎಂಬುವುದೇ ಕಾಳಜಿ.