ಕ್ಯಾಂಟೀನ್ ನಲ್ಲಿ ಸಮೋಸ ಬೆಲೆ ಹೆಚ್ಚಾಯ್ತೆಂದು ಕೆಲಸಕ್ಕೇ ರಾಜೀನಾಮೆ ನೀಡಿದ ಲಾಯರ್ !!!
ಈಗಿನ ಬಿಜಿ ಲೈಫ್ ನಲ್ಲಿ ತುಂಬಾ ಜನ ಹೆಚ್ಚಾಗಿ ಹೊರಗಿನ ಊಟ ತಿಂಡಿಗಳ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ. ಹಾಗಾಗಿಯೇ ಹೋಟೆಲ್, ಕ್ಯಾಂಟೀನ್ ಗಳ ಬೇಡಿಕೆ ಹೆಚ್ಚು.
ಬ್ಯಾಚುಲರ್ಸ್ ಗಳಿಗಂತೂ ಕ್ಯಾಂಟೀನ್, ಹೋಟೆಲ್ ಊಟನೇ ಮೃಷ್ಟಾನ್ನ. ಹಾಗಾದರೆ ಒಂದು ವೇಳೆ ಆಹಾರದ ಬೆಲೆ ಹೆಚ್ಚಾಯ್ತು ಅಂದರೆ ಸಾಧಾರಣವಾಗಿ ಎಲ್ಲರೂ ಏನು ಮಾಡುತ್ತಾರೆ ? ಸ್ವಲ್ಪ ಕಷ್ಟ ಆದರೂ ಪರ್ವಾಗಿಲ್ಲ, ಟಿಫನ್ ಬಾಕ್ಸ್ ಹಿಡಿದುಕೊಂಡು ಹೋಗಬಹುದು ಎಂಬ ಆಲೋಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ಕ್ಯಾಂಟೀನ್ ನಲ್ಲಿ ಸಮೋಸ ಬೆಲೆ ಹೆಚ್ಚಾಗಿದೆ ಎಂದು ತಮ್ಮ ಕೆಲಸಕ್ಕೇ ರಾಜೀನಾಮೇ ನೀಡೋದಾ ? ಇದೆಂಥಾ ಅಚ್ಚರಿ ಅಂತ ನಿಮಗೆ ಅನಿಸಬಹುದು. ಆದರೆ ಇದು ನಿಜ.
ಕ್ಯಾಂಟೀನ್‌ನಲ್ಲಿ ಸಮೋಸ ಬೆಲೆ ಹೆಚ್ಚಾಗಿದೆ ಎಂದು ವಕೀಲರೊಬ್ಬರು ಕೆಲಸವನ್ನೇ ಬಿಟ್ಟಿದ್ದಾರೆ. ಅಬ್ಬಾ ಹೀಗೂ ಉಂಟೇ ಎಂದೆನಿಸುತ್ತೆ ಈ ಸುದ್ದಿ ನೋಡಿದರೆ. ಕ್ಯಾಂಟೀನ್‌ನಲ್ಲಿ ಆಹಾರದ ಬೆಲೆ ಜಾಸ್ತಿ ಆದರೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಇವರು. ಆದರೂ ಎಷ್ಟೊಂದು ಬದಲಿ ಮಾರ್ಗವಿರುವಾಗ ಕೆಲಸ ಬಿಡೋ ಯೋಚನೆ ಮಾಡಿದ್ದೇಕೆ ? ಅದೂ ಸಮೋಸಕ್ಕಾಗಿ ಯಾರಾದರೂ ಕೆಲಸ ಬಿಡಲು ಸಾಧ್ಯವೇ ? ಸ್ವಲ್ಪ ಕಷ್ಟ ಎನಿಸಿದರೂ ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಕ್ಯಾಂಟೀನ್ ನಲ್ಲಿ ಸಮೋಸ ಬೆಲೆ ಜಾಸ್ತಿ ಆಯಿತೆಂದು ವಕೀಲರೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಡಿಬಿಎ ವಕೀಲರ ಸಂಘದ ಕಾರ್ಯಕಾರಿ ಸದಸ್ಯರೊಬ್ಬರು ಜಿಲ್ಲಾ ನ್ಯಾಯಾಲಯದ ಕ್ಯಾಂಟೀನ್‌ನಲ್ಲಿ ಸಮೋಸಾಗಳ ದುಬಾರಿ ಬೆಲೆಗೆ ರಾಜೀನಾಮೆ ನೀಡಿದ್ದಾರೆ.
ಈ ಬೆಲೆ ಏರಿಕೆ ಮಾಡಿದ್ದಕ್ಕೆ ರಾಜೀನಾಮೆ ನೀಡಿದ ವಕೀಲರ ಹೆಸರು ಧರ್ಮರಾಜ್ ಬೋಗ್ತಿ. ನ್ಯಾಯಾಲಯದ ಎರಡನೇ ಮಹಡಿಯಲ್ಲಿ ಕ್ಯಾಂಟೀನ್ ಅನ್ನು ಡಿಬಿಎ ನಡೆಸುತ್ತಿದೆ. ಕಳೆದ ಕೆಲವು ದಿನಗಳಿಂದ ಈ ಕ್ಯಾಂಟೀನ್‌ಗಳಲ್ಲಿ ದೊರೆಯುವ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಾಗಾಗಿ ವಕೀಲರು ಸಿಡಿಮಿಡಿಗೊಂಡಿದ್ದಾರೆ. ಆದರೆ ಕ್ಯಾಂಟೀನ್ ನಡೆಸುವವರು ಹೇಳುವ ಪ್ರಕಾರ ಸಿಲಿಂಡರ್ ಬೆಲೆ ಹೆಚ್ಚಳ ಆಗಿದ್ದರಿಂದ ಆಹಾರ ಪದಾರ್ಥಗಳ ಬೆಲೆ ಕೂಡಾ ಹೆಚ್ಚಾಗಿದೆ. ಇದೇ ವೇಳೆ ಬೋಗ್ತಿ ಅವರು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸದೇ, ಬೆಲೆ ಏರಿಕೆ ಬಗ್ಗೆ ಅಧಿಕಾರಿಗಳೊಂದಿಗೆ ಏನೂ ಹೇಳದೇ ರಾಜೀನಾಮೆ ನೀಡಿದ್ದಾರೆ. ಡಿಬಿಎ ಅಧಿಕಾರಿಗಳ ಪ್ರಕಾರ, ಹೆಚ್ಚುತ್ತಿರುವ ಸಿಲಿಂಡರ್ ಮತ್ತು ಪೆಟ್ರೋಲ್ ಬೆಲೆ ಸೇರಿದಂತೆ ಕ್ಷೇತ್ರಗಳಾದ್ಯಂತ ಆಹಾರ ಹಣದುಬ್ಬರ ಹೆಚ್ಚಾಗಿದೆ. ಹಾಗಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಕ್ಯಾಂಟೀನ್ ನಡೆಸುವವರ ವಾದ.