ಬೆಳ್ತಂಗಡಿ: ತಹಶೀಲ್ದಾರ್ ದೂರಿನ ಮೇರೆಗೆ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಎಸ್ಡಿಪಿಐ ಮುಖಂಡರ ವಿರುದ್ಧ ಪ್ರಕರಣ ದಾಖಲು
ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕುರಿತು ಬೆಳ್ತಂಗಡಿ ತಹಶೀಲ್ದಾರ್ ನೀಡಿರುವ ದೂರಿನ ಮೇರೆಗೆ ಎಸ್ಡಿಪಿಐ ಪಕ್ಷದ ಮುಖಂಡರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಜಿಲ್ಲಾಧಿಕಾರಿಯವರು ಘೋಷಿಸಿದ ನಿಷೇದಾಜ್ಞೆ ಜಾರಿಯಾಲ್ಲಿರುವಾಗಲೇ ಮಾ.29ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಕಾನೂನನ್ನು ಮೀರಿ, ಧ್ವನಿವರ್ಧಕ ಉಪಯೋಗಿಸಿ ಮೆರವಣಿಗೆ ನಡೆಸಿ ಕಾನೂನು ಉಲ್ಲಂಘಿಸಿರುವ ಬಗ್ಗೆ ತಹಶೀಲ್ದಾರ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಕಲಂ143, 188 ಜೊತೆಗೆ 149ಐಪಿಸಿ ಹಾಗೂ 34, 36 ,107, 109 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಾ.29 ರಂದು ಕನ್ಯಾಡಿ ದಿನೇಶ್ ಕೊಲೆ ಖಂಡಿಸಿ ಎಸ್ ಡಿಪಿಐ ಪಕ್ಷದ ಮುಖಂಡರು ಬೆಳ್ತಂಗಡಿಯಿಂದ ಮಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು.