ಎಲ್ಲರೂ ತಿಳಿದುಕೊಳ್ಳಲೇಬೇಕಾದ ಮುಟ್ಟಿನ ಬಗ್ಗೆ ಗುಟ್ಟಿನ ವಿಷಯಗಳು ಇವು
ಋತುಸ್ರಾವದ ಬಗ್ಗೆ ಮೊದಲ ಬಾರಿಗೆ ಋತುಸ್ರಾವ ಚಕ್ರ ಪ್ರವೇಶಿಸುತ್ತಿರುವವರಿಂದ ಆರಂಭಿಸಿ ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ಒಂದು ಅಂಶಗಳು ಇದ್ದೇ ಇರುತ್ತವೆ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದಿಲ್ಲ; ಹೀಗಾಗಿ ಅದು ಒಂದು ಗುಟ್ಟಿನ ವಿಷಯವಾಗಿಯೇ ಉಳಿದುಹೋಗುತ್ತದೆ. ಹೆಚ್ಚಿನ ಬಾರಿ ಮೊದಲ ಬಾರಿ ಮುಟ್ಟಾಗುವ ಹದಿಹರೆಯದವರಿಗೆ ಈ ಬಗ್ಗೆ ಏನೂ ತಿಳಿದಿರುವುದಿಲ್ಲ- ಅಥವಾ ತಂದೆ ತಾಯಿ ಈ ಬಗ್ಗೆ ಕನಿಷ್ಠ ಅರಿವನ್ನೂ ಮಕ್ಕಳಲ್ಲಿ ಮೂಡಿಸಿರುವುದಿಲ್ಲ. ಮಕ್ಕಳು ಎಂಟು- ಹತ್ತು ವರ್ಷ ಆದೊಡನೆಯೇ ಅವರಿಗೆ ಋತುಸ್ರಾವದ ಬಗ್ಗೆ ಸರಿಯಾದ ಕಲ್ಪನೆ ಮೂಡಿಸಿ, ಹೆಣ್ಣು ಮಕ್ಕಳನ್ನು ಸಜ್ಜುಗೊಳಿಸುವುದು ಅಗತ್ಯ. ಗಂಡು ಮಕ್ಕಳಲ್ಲೂ ಈ ಕುರಿತಂತೆ ಅರಿವು ಮೂಡಿಸಿ, ಅವರು ಋತುಸ್ರಾವವನ್ನು ಅಸ್ಪೃಶ್ಯ ರೀತಿಯಲ್ಲಿ ನೋಡದಂತೆ ಪ್ರಜ್ಞೆ ಬೆಳೆಸುವುದು ಅಗತ್ಯ.
ಪ್ರತಿ ತಿಂಗಳು ಮಹಿಳೆಯರ ಗುಪ್ತಾಂಗದಿಂದ ಸ್ವಲ್ಪ ರಕ್ತ ಬರುತ್ತದೆ. ಅದನ್ನು ಮುಟ್ಟು ಎನ್ನುತ್ತಾರೆ. ಅದು ಗಾಯವಾದ್ದರಿಂದ ಬರುವುದಲ್ಲ, ಬದಲು ದೇಹ ಮಗು ಹೇರಲು ಸಿದ್ಧವಾಗುವ ರೀತಿಯದು. ಹೆಚ್ಚಿನ ಹುಡುಗಿಯರಿಗೆ ಅವರ 10 ರಿಂದ 15 ವಯಸ್ಸಿನ ನಡುವೆ ಮುಟ್ಟು ಆರಂಭವಾಗುತ್ತದೆ. ಸರಾಸರಿ ವಯಸ್ಸು 12, ಆದರೆ ಪ್ರತೀ ಹುಡುಗಿಗೂ ಅವಳದ್ದೇ ಆದ ಅವಧಿ ಇರುತ್ತದೆ. ಮುಟ್ಟು ಆರಂಭ ಆಗುವುದರ ಬಗ್ಗೆ ಕೆಲವೊಂದು ಲಕ್ಷಣಗಳು ಕಾಣಿಸುತ್ತವೆ. ಸಾಮಾನ್ಯವಾಗಿ, ಹೆಣ್ಣು ಮಕ್ಕಳ ಸ್ತನಗಳ ಬೆಳವಣಿಗೆ ಆದ 2 ವರ್ಷಕ್ಕೆ ಮುಟ್ಟು ಆರಂಭವಾಗುತ್ತದೆ. ಮತ್ತೊಂದು ಲಕ್ಷಣ ಯೋನಿ ಸ್ರಾವ(ಲೋಳೆಯಂತೆ). ಈ ಸ್ರಾವ ಹೆಣ್ಣು ಮುಟ್ಟಾಗುವ ಆರು ತಿಂಗಳು ಅಥವಾ ಒಂದು ವರ್ಷ ಮೊದಲು ಆರಂಭವಾಗುತ್ತದೆ.
ಹಿಂದೆ 14-16 ವರ್ಷಕ್ಕೆ ಹೆಣ್ಣುಮಕ್ಕಳು ಋತುಮತಿ (Menstruation) ಯಾಗುತ್ತಿದ್ದರು. ಈಗ 12-13 ವರ್ಷಕ್ಕೆ ಪೀರಿಯೆಡ್ಸ್ (Periods) ಆರಂಭವಾಗುತ್ತಿದೆ. ಇನ್ನು ಕೆಲವರು ಬಹಳ ಚಿಕ್ಕ ವಯಸ್ಸಿಗೇ ಆಗುತ್ತಾರೆ. ಬಹಳ ಚಿಕ್ಕ ವಯಸ್ಸಿಗೆ ಋತುಮತಿಯಾದರೆ ತಮ್ಮ ದೇಹಾರೋಗ್ಯ ಕಾಪಾಡಿಕೊಳ್ಳುವ ಪ್ರಜ್ಞೆ ಅವರಲ್ಲಿ ಇರುವುದಿಲ್ಲ. ಹಾಗೇ ಅದು ಅವರ ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಹುಡುಗಿಯರು 8 ವರ್ಷಕ್ಕಿಂತ ಮುಂಚೆ ಋತುಮತಿ ಆದರೆ ವೈದ್ಯರನ್ನು ಸಂಪರ್ಕಿಸಬೇಕು. 6 ವರ್ಷಕ್ಕಿಂತ ಮುಂಚೆಯೇ ಹುಡುಗಿ ಋತುಮತಿ ಆದರೆ ಅದು ಖಂಡಿತವಾಗಿಯೂ ಆತಂಕಕಾರಿ ವಿಚಾರ. ಮೊದಲ ಬಾರಿಗೆ ಮುಟ್ಟಾದಾಗ ಸಾಮಾನ್ಯವಾಗಿ ರಕ್ತಸ್ರಾವ (Bleeding) ಹೆಚ್ಚಿರುತ್ತದೆ. ಇದರ ಬಗ್ಗೆ ಗಮನ ಕೊಡಬೇಕು. ಆರೋಗ್ಯಕರ ಆಹಾರ ನೀಡಬೇಕು. ಸಾಕಷ್ಟು ವಿಶ್ರಾಂತಿ ನೀಡಬೇಕು.
ದಲಾದ ಜೀವನ ಶೈಲಿಯಿಂದ ಇಂದಿನ ಹೆಣ್ಣು ಮಕ್ಕಳು ಋತುಮತಿಯಾಗುವ ವಯೋಮಾನದಲ್ಲಿ ಕುಸಿತ ಕಂಡುಬಂದಿದೆ. 2012ರ ಸಮೀಕ್ಷೆ ಪ್ರಕಾರ, 13 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು ಸಹಜವಾಗಿ ಋತುಮತಿಯಾಗುತ್ತಿದ್ದರು. ಆದರೆ, 2016-17ರ ಸಮೀಕ್ಷೆ ಪ್ರಕಾರ ಇದು 11 ರಿಂದ 12 ವರ್ಷಕ್ಕೆ ಇಳಿದಿತ್ತು. ಆದರೆ, ಆತಂಕಾರಿ ವಿಷಯವೆಂದರೆ ಕಳೆದೆರಡು ವರ್ಷದಿಂದ ಈ ಅವಧಿಯು 8 ರಿಂದ 9ವರ್ಷಕ್ಕೆ ಇಳಿದಿದೆ.
ಬೇಗ ಋತುಮತಿಯಾಗಲು ಕಾರಣವೇನು?
*ಸ್ಟಿರಾಯ್ ಕ್ರೀಮ್, ಮಾತ್ರೆಗಳು, ರಾಸಾಯನಿಕಯುಕ್ತ ಶಾಂಪು ಹಾಗೂ ಇತರೆ ಬ್ಯೂಟಿ ಉತ್ಪನ್ನಗಳು ಸಹ ಅಸಹಜ ಋತುಚಕ್ರಕ್ಕೆ ಕಾರಣವಾಗುತ್ತದೆ. ಇತ್ತೀಚೆಗೆ ಬರುವ ಎಲ್ಲಾ ಕ್ರೀಮ್ ಹಾಗೂ ರಾಸಾಯನಿಯುಕ್ತ ಪದಾಥಗಳಲ್ಲಿ ಸ್ಟೀರಾಯ್ ಸಾಮಾನ್ಯವಾಗಿದೆ. ಇದರ ಬಳಕೆಯು ಮಕ್ಕಳ ದೇಹದ ಹಾಗೂ ಹಾರ್ಮೋನ್‌ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಹೀಗಾಗಿ ಮಕ್ಕಳಿಗೆ ಬಳಸುವ ಯಾವುದೇ ಪದಾರ್ಥಗಳಿದ್ದಾರೂ ಸಹ ಅದರ ತಯಾರಿಕೆಗೆ ಬಳಸಿರುವ ವಸ್ತುಗಳ ಬಗ್ಗೆ ಓದಿ ತಿಳಿದುಕೊಂಡ ನಂತರವೇ ಬಳಸುವುದು ಮುಖ್ಯ.
- ವಯಸ್ಸಿಗಿಂತ ಅಧಿಕ ತೂಕ ಹೊಂದಿರುವ ಮಕ್ಕಳು ಅವಧಿಗೂ ಮುನ್ನವೇ ಋತುಮತಿಯಾಗುವ ಸಾಧ್ಯತೆ ಹೆಚ್ಚು.
- ಬೊಜ್ಜು, ಜಂಕ್ ಫುಡ್ ಸೇವನೆ, ಪ್ರಿಸವೇಟಿವ್‌ನಂಥ ಆಹಾರಗಳ ಸೇವನೆಯಿಂದ ಮಕ್ಕಳ ದೇಹ ಬೇಗ ಸ್ಪಂದಿಸಿ, ಹಾರ್ಮೋನ್ ಬದಲಾವಣೆಯಿಂದ ಮಕ್ಕಳು 8-9ನೇ ವಯಸ್ಸಿಗೇ ಋತುಮತಿಯಾಗುವ ಸಾಧ್ಯತೆ ಇದೆ.
* ದೈಹಿಕ ಆಟ, ವ್ಯಾಯಾಮದ ಕೊರತೆ, ಶೈಕ್ಷಣಿಕ ಒತ್ತಡ.
ಇದಕ್ಕೆ ಪರಿಹಾರವೆಂದರೆ ಮಕ್ಕಳ ಜೀವನಶೈಲಿಯನ್ನು ಉತ್ತಮಗೊಳಿಸುವುದು. ಪಾಠದ ಜೊತೆ ಆಡದಲ್ಲೂ ಮಕ್ಕಳನ್ನು ತೊಡಗಿಸುವುದು. ಉತ್ತಮ ಆಹಾರನೀಡಿ, ಜಂಕ್ ಪುಡ್ ನಿಂದ ದೂರವಿಡುವುದು. ಮಕ್ಕಳು ಅವಧಿಗೂ ಮುನ್ನ ಋತುಮತಿಯಾದರೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮೊದಲ ಆ ಸತ್ಯವನ್ನು ಒಪ್ಪಿಕೊಂಡು, ಮಗುವಿನಲ್ಲೂ ಆತ್ಮಸೈರ್ಯ ತುಂಬಬೇಕು. ದೇಹದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ಆ ಮಗುವಿಗೆ ತಿಳುವಳಿಕೆ ನೀಡಬೇಕು.