ಪ್ಲಾಸ್ಟಿಕ್ ಬಾಟಲಿಗಳನ್ನು ಕೊಟ್ಟರೆ ಈ ದೇಶದಲ್ಲಿ ಬಸ್ ಉಚಿತ ಪ್ರಯಾಣ | ವಿನೂತನ ಆಫರ್ ಗೆ ಮುಗಿಬಿದ್ದ ಜನ
ಪ್ಲಾಸ್ಟಿಕ್ ಸರಿಯಾಗಿ ಸಂಸ್ಕರಣೆಗೊಳ್ಳದ ವಸ್ತು. ಜನ ನೀರು, ತಂಪು ಪಾನೀಯ, ಅಥವಾ ಇನ್ನೇನಾದರೂ ಕುಡಿದು ಬಳಿಕ ಪ್ಲಾಸ್ಟಿಕ್ ಗಳನ್ನು ಅಲಲ್ಲೇ ಬಿಸಾಕುವುದು ಸಾಮಾನ್ಯವಾಗಿದೆ. ಅದನ್ನು ಡಸ್ಟ್ ಬಿನ್ ಗೂ ಹಾಕಿದರೂ ಅದರ ಸಂಸ್ಕರಣೆ ಅಷ್ಟೊಂದು ಸುಲಭವಲ್ಲ. ಹೀಗಾಗಿಯೇ ಇಲ್ಲೊಂದು ಕಂಪನಿ ಈ ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯ ತಪ್ಪಿಸುವ ದೃಷ್ಟಿಯಿಂದ ಟಾಸ್ಕ್ ನೀಡಿದೆ. ಅದೇನು ಗೊತ್ತೇ ? ಬನ್ನಿ ತಿಳಿಯೋಣ!
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸಾರ್ವಜನಿಕರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಒಂದು ಅವಕಾಶ ನೀಡಿದೆ. ಈ ಅದ್ಭುತ ಅವಕಾಶ ನೀಡಿದವರು ಅಬು ಧಮಿ ಮುನ್ಸಿಪಲೀಸ್ ಮತ್ತು ಸಾರಿಗೆ ಇಲಾಖೆಯ ಸಮಗ್ರ ಸಾರಿಗೆ ಕೇಂದ್ರ.
ಈ ಉಚಿತ ಪ್ರಯಾಣದ ಅವಕಾಶ ಪಡೆಯಲು ನೀವು ಮಾಡಬೇಕಿರುವುದು ಇಷ್ಟೇ. ಖಾಲಿ ಪ್ಲಾಸ್ಟಿಕ್, ಬಾಟಲಿಗಳನ್ನು, ಸಂಗ್ರಹಿಸಿ ತಂದು ಕೊಡುವುದು.
ಅಬುಧಾಬಿ ಡಿಎಂಟಿ ಈ ಅಭಿಯಾನಕ್ಕೆ ‘Points for Plastic: the Bus Tariff’ ಎಂಬ ಹೆಸರಿನಡಿಯಲ್ಲಿ ಈ ಕೆಲಸ ನಿರ್ವಹಿಸುತ್ತಿದೆ. ಅದರಡಿಯಲ್ಲಿ ಅಬುಧಾಬಿಯ ಮುಖ್ಯ ಬಸ್ ನಿಲ್ದಾಣದಲ್ಲಿ ಒಂದು ಪ್ಲಾಸ್ಟಿಕ್ ಡಿಪೋಸಿಟ್ ಪ್ಲಾಸ್ಟಿಕ್ ಬಾಟಲಿಯನ್ನು ಠೇವಣಿ ಇಡುವ ಮಶಿನ್ ಅಳವಡಿಸಲಾಗಿದೆ. ಯಾವುದೇ ಪ್ರಯಾಣಿಕ ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ಅದರಲ್ಲಿ ಹಾಕಿದರೆ ಅದರ ಬದಲಿಗೆ ಅವರಿಗೆ ಪಾಯಿಂಟ್ ಸಿಗುತ್ತದೆ. ಹೀಗೆ ಪ್ಲಾಸ್ಟಿಕ್ ಬಾಟಲಿ ಕೊಟ್ಟು ಗಳಿಸಿದ ಪಾಯಿಂಟ್‌ಗಳನ್ನು ಬಸ್ ಪ್ರಯಾಣ ದರಕ್ಕೆ ಅನ್ವಯ ಮಾಡಿಕೊಳ್ಳಬಹುದು.
ಉದಾಹರಣೆ : 600 ಎಂಎಲ್ ಅಥವಾ ಅದಕ್ಕೂ ಕಡಿಮೆ ಅಳತೆಯ ಪ್ರತಿ ಬಾಟಲಿಗೂ ಒಂದು ಪಾಯಿಂಟ್ ಇರುತ್ತದೆ. ಹಾಗೇ, 600 ಎಂಎಲ್ ಮತ್ತು ಅದಕ್ಕೂ ದೊಡ್ಡದಾದ ಬಾಟಲಿಗಳಿಗೆ 2 ಪಾಯಿಂಟ್. ಅಂದರೆ ಪ್ರತಿ ಬಾಟಲಿಗೆ 2 ಪಾಯಿಂಟ್ ಪಡೆಯಬಹುದು. ಹೀಗೆ ಪ್ಲಾಸ್ಟಿಕ್ ಬಾಟಲಿಯಿಂದ ಗಳಿಸಿದ ಒಂದು ಪಾಯಿಂಟ್ 10 ಫಿಲ್ಸ್‌ಗಳಿಗೆ ಸಮ(ಫಿಲ್ಸ್ ಎಂದರೆ ಕರೆನ್ಸಿಯ ಘಟಕ. ಭಾರತದಲ್ಲಿ ರೂಪಾಯಿಗೆ ಪೈಸೆ ಘಟಕವಿದ್ದಂತೆ). ಹಾಗೇ 10 ಪಾಯಿಂಟ್‌ಗಳು 1 ದಿರ್ಹಾಮ್‌ಗೆ ಸರಿಸಮ( ದಿರ್ಹಾಮ್ ಎಂದರೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕರೆನ್ಸಿ). ಈ ಲೆಕ್ಕಾಚಾರದಲ್ಲಿ ಬಸ್ ದರವನ್ನು ಪರಿಗಣಿಸಿ, ಎಷ್ಟು ಹಣ ಆಗುತ್ತದೆಯೋ ಅಷ್ಟು ದೂರ ಉಚಿತ ಪ್ರಯಾಣ ಮಾಡಬಹುದಾಗಿದೆ.