NEET UG 2022 : ಜುಲೈನಲ್ಲಿ ನೀಟ್ ಪರೀಕ್ಷೆ, ಏಪ್ರಿಲ್‌ನಿಂದ ನೋಂದಣಿ ಆರಂಭ !
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜುಲೈನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ಪದವಿಪೂರ್ವ (NEET UG) 2022 ಪರೀಕ್ಷೆ ನಡೆಸಲಿದೆ ಎಂದು ಎನ್ಟಿಎ ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿಪೂರ್ವ ಪ್ರವೇಶ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ.
ವೈದ್ಯಕೀಯ ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಒಂದು ದಿನದ ಪೆನ್-ಪೇಪರ್ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುವುದು.
ಇವುಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಉರ್ದು ಸೇರಿವೆ – ಇದು
ಭಾರತದಾದ್ಯಂತ ಲಭ್ಯವಿರುತ್ತದೆ. ಇವುಗಳಲ್ಲದೆ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ,ಮಲಯಾಳಂ,
ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು 10 ಪ್ರಾದೇಶಿಕ ಭಾಷೆಗಳಲ್ಲಿ ಆಯಾ ಪ್ರಾದೇಶಿಕ ಕೇಂದ್ರಗಳಲ್ಲಿ ಪರೀಕ್ಷೆಯನ್ನ ನಡೆಸಲಾಗುವುದು.
nta.ac.inneet.nta.nic.in ವೆಬೈಟ್‌ಗಳಲ್ಲಿ ಇಂದು ನೋಟಿಸ್ ಬಿಡುಗಡೆ ಮಾಡಲಾಗುವುದು ಎಂದು ಎಸ್ಟಿಎ ಅಧಿಕಾರಿಗಳು ಹೇಳಿದ್ದಾರೆ.