ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ : 3550 ಸಶಸ್ತ್ರ ಪಿಸಿಗಳ ನೇಮಕ ಶೀಘ್ರದಲ್ಲೇ!!!
ಕರ್ನಾಟಕ ಪೊಲೀಸ್ ಇಲಾಖೆಯು ಇತ್ತೀಚೆಗೆ 1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಏಪ್ರಿಲ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿತ್ತು. ಇದೀಗ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ.
ಪೊಲೀಸ್ ಇಲಾಖೆ ಇದೀಗ 3550 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (KSP Armed Police Constable Recruitment 2022) ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಜತೆಗೆ ಸದರಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ತಲುಪಿದೆ. ರಾಜ್ಯದಾದ್ಯಂತ ಘಟಕವಾರು ಹುದ್ದೆಗಳನ್ನು ಹಂಚಿಕೆ ಮಾಡಿದ್ದು, ಸದರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ನವರು ಸೂಚಿಸಿದ್ದಾರೆ.
ಈ ಹುದ್ದೆಗಳನ್ನು 2022-23ನೇ ಸಾಲಿನಲ್ಲಿ ಭರ್ತಿ ಮಾಡಲಿದ್ದು, ಶೀಘ್ರವೇ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಆಗಲಿದೆ.
ಘಟಕವಾರು ಹಂಚಿಕೆ ಮಾಡಲಾದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ವಿವರ ಈ ಕೆಳಗಿನಂತೆ ನೀಡಲಾಗಿದೆ.
ಬೆಂಗಳೂರು ನಗರ – 1330
ಮೈಸೂರು ನಗರ – 90
ಮಂಗಳೂರು ನಗರ – 235
ಹುಬ್ಬಳ್ಳಿ-ಧಾರವಾಡ ನಗರ – 60
ಬೆಂಗಳೂರು ಜಿಲ್ಲೆ -160
ತುಮಕೂರು – 65
ಕೋಲಾರ – 40
ಕೆಜಿಎಫ್ – 14
ರಾಮನಗರ – 75
ಮೈಸೂರು ಜಿಲ್ಲೆ – 152
ಚಾಮರಾಜನಗರ- 40
ಹಾಸನ – 55
ಕೊಡಗು – 20
ಮಂಡ್ಯ- 75
ದಾವಣಗೆರೆ- 40
ಶಿವಮೊಗ್ಗ – 70
ಚಿತ್ರದುರ್ಗ – 20
ಹಾವೇರಿ- 60
ದಕ್ಷಿಣ ಕನ್ನಡ/ ಮಂಗಳೂರು – 185
ಉಡುಪಿ – 40
ಯುಕೆ ಕಾರವಾರ – 80
ಚಿಕ್ಕಮಗಳೂರು – 70
ಬೆಳಗಾವಿ – 90
ಗದಗ – 40
ಧಾರವಾಡ – 75
ಕಲಬುರಗಿ – 80
ಬೀದರ – 70
ಯಾದಗಿರಿ – 50
ಬಳ್ಳಾರಿ – 69
ರಾಯಚೂರು – 50
ಕೊಪ್ಪಳ – 20
ಮೌಂಟೆಡ್ ಕಂಪನಿ, ಮೈಸೂರು – 30
ಒಟ್ಟು 3550 ಹುದ್ದೆಗಳು.