ಮುಂಜಾನೆ ಎದ್ದಕೂಡಲೇ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬೇಡಿ !

ಮುಂಜಾನೆ ಆರಂಭ ಬಹಳ ಮುಖ್ಯ. ಮುಂಜಾನೆ ಶುಭವಾಗಿದ್ದರೆ ದಿನಪೂರ್ತಿ ಶುಭವಾಗಿರುತ್ತದೆ. ನಮ್ಮ ದಿನ ಹೇಗೆ ಆರಂಭವಾಗುತ್ತದೆ ಎನ್ನುವುದು ತುಂಬಾ ಮುಖ್ಯ. ಆರಂಭ ಚೆನ್ನಾಗಿದ್ದರೆ ಮುಕ್ತಾಯವೂ ಒಳ್ಳೆಯದಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಅದು ಮಾಡಬೇಕು , ಇದು ಮಾಡಲೇಬೇಕು ಎಂದು ಹಲವರು ಹೇಳಿರುತ್ತಾರೆ. ನೀವು ಯೋಚಿಸಿರುತ್ತಿರಿ. ಆದರೆ ಈ ಕೆಳಗಿನ ಅಂಶಗಳನ್ನು ಖಂಡಿತವಾಗಿ ಬೆಳಿಗ್ಗೆ ಎದ್ದಕೂಡಲೇ ಮಾಡಬೇಡಿ.

 

ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಯೇ ಬಿಟ್ಟಿದೆ. ಎದ್ದಕತ್ಷಣ ಕಣ್ಣು ಬಿಡುವ ಮೊದಲೆ ಮೊಬೈಲ್ ಎದುರಿಗಿರಬೇಕು ಹಲವು ಜನರಿಗೆ. ಇದು ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾಕೆಂದರೆ, ರಾತ್ರಿ ಮಲಗುವಾಗ ಬಹಳ ಹೊತ್ತಿನವರೆಗೆ ಕಣ್ಣಿಗೆ  ಬೆಳಕು ಬೀಳುವುದಿಲ್ಲ. ಹಾಗಿರುವಾಗ ಬೆಳಗ್ಗೆ ಎದ್ದ ತಕ್ಷಣ, ಮೊಬೈಲ್ ನೋಡುವುದು ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ. 

ಅನೇಕ ಜನರು ಬೆಳಿಗ್ಗೆ ಎದ್ದ ಕೂಡಲೇ ಚಹಾ  ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದಕ್ಕೆ ಬೆಡ್ ಕಾಫಿ ಎಂದೆಲ್ಲಾ ಹೇಳುತ್ತಾರೆ‌. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಅಲ್ಲದೆ, ಹೊಟ್ಟೆಯಲ್ಲಿ ಗ್ಯಾಸ್ ಕೂಡಾ ಉತ್ಪತ್ತಿಯಾಗುತ್ತದೆ. 

ಬೆಳಿಗ್ಗೆಯೇ ಸ್ನಾನ (Taking bath) ಮಾಡುವುದು ಒಳ್ಳೆಯ ಅಭ್ಯಾಸವೇ. ಆದರೆ, ಎದ್ದ ಕೂಡಲೇ ಸ್ನಾನಕ್ಕೆ ಹೋಗುವುದು ತಪ್ಪು. ಹೀಗೆ ಮಾಡುವುದರಿಂದ ದೇಹದ ತಾಪಮಾನದ ಮೇಲೆ ಪರಿಣಾಮವಾಗುತ್ತದೆ. 

ಬೆಳಗ್ಗೆ ರೇಗುವುದು ಕೋಪಮಾಡಿಕೊಳ್ಳುವುದು ಮಾಡಬೇಡಿ. ಬೆಳಗ್ಗೆ ನೀವು 20 ನಿಮಿಷ ಕಾಲ ಕೋಪಿಸಿದರೆ ಆಗ ನಿಮ್ಮ ಇಡೀ ದಿನ ಕೆಟ್ಟದಾಗಿರುತ್ತದೆ. ನಿಮ್ಮಲ್ಲಿನ ಧನಾತ್ಮಕ ಶಕ್ತಿಯನ್ನು ಇದು ತಡೆಯುವುದು. ಹೀಗಾಗಿ ನೀವು ಬೆಳಗ್ಗ ಸಂತೋಷದಿಂದ ಎದ್ದೇಳಿ. 

ಹೆಚ್ಚಿನವರಿಗೆ ಹಾಸಿಗೆ ಬಿಟ್ಟು ಎದ್ದೇಳುವ ಮೊದಲೇ ಒಂದು ಧಮ್ ಎಳೆಯಬೇಕು. ಆದರೆ ನಮ್ಮ ದೇಹವು ಎಂಟು ಗಂಟೆಗಳ ಕಾಲ ಯಾವುದೇ ರೀತಿಯ ಪೋಷಕಾಂಶಗಳನ್ನು ಪಡೆಯದೆ ಇರುವುದರಿಂದ ಬೆಳಗ್ಗೆ ಸಿಗರೇಟ್ ಸೇದಿದರೆ ಅಥವಾ ಸ್ಟ್ರಾಂಗ್ ಕಾಫಿ ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು.

Leave A Reply

Your email address will not be published.