ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ|ಹುಟ್ಟಿದ 48 ಗಂಟೆಯೊಳಗೆ ಸಾಯುವ ಇಂತಹ ಪ್ರಕರಣಗಳಲ್ಲಿ ಈ ಕೂಸು ಸಾವು ಗೆಲ್ಲಲಿ

Share the Article

ಜಗತ್ತಿನಲ್ಲಿ ವಿಸ್ಮಯಕಾರಿ ವಿಚಾರಗಳು ನಡೆಯುತ್ತಲೇ ಇರುತ್ತದೆ. ಅದರಲ್ಲೂ ತಾಯಿ-ಮಗುವಿನ ಸಂಬಂಧ ಒಂದು ವಿಸ್ಮಯವೇ.ಇದೀಗ ಈ ಸಂಬಂಧದಲ್ಲೂ ವಿಸ್ಮಯತೆ ಮೆರೆದ ಘಟನೆಯೊಂದು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.


ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದು,ಮೂರನೇ ಕೈ ಎರಡು ಮುಖಗಳ ನಡುವೆ ಹಿಂಭಾಗದಲ್ಲಿದೆ.ಜಾವ್ರಾ ನಿವಾಸಿ ಶಾಹೀನ್ ಎಂಬುವರು ಈ ಮಗುವಿಗೆ ಜನ್ಮ ನೀಡಿದವರಾಗಿದ್ದಾರೆ.


ಸೋನೋಗ್ರಫಿಯಲ್ಲಿ ಈ ಮಗು ಅವಳಿಯಂತೆ ಕಾಣುತ್ತಿದ್ದು,ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್.ಎನ್‌.ಸಿ.ಯು. ಉಸ್ತುವಾರಿ ಡಾ. ನವೇದ್ ಖುರೇಷಿ ತಿಳಿಸಿದ್ದಾರೆ.ಇಂತಹ ಅನೇಕ ಮಕ್ಕಳು ಗರ್ಭದಲ್ಲಿ ಅಥವಾ ಹುಟ್ಟಿದ 48 ಗಂಟೆಗಳ ಒಳಗೆ ಸಾಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಂದು ಆಯ್ಕೆ ಇದ್ದರೂ, ಇಂತಹ ಶೇ.60ರಿಂದ 70ರಷ್ಟು ಮಕ್ಕಳು ಬದುಕುಳಿಯುವುದಿಲ್ಲ.


ಮಗುವನ್ನು ರತ್ಲಾಮ್‌ ನ ಎಸ್‌.ಎನ್‌.ಸಿ.ಯು.ನಲ್ಲಿ ಸ್ವಲ್ಪ ಸಮಯದವರೆಗೆ ಇರಿಸಲಾಗಿದ್ದು,ಅಲ್ಲಿಂದ ಮಗುವನ್ನು ಇಂದೋರ್‌ ಎಂವೈ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.ತಾಯಿಯನ್ನು ರತ್ಲಾಮ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು,ಮಗು ವೈದ್ಯರ ಮೇಲ್ವಿಚಾರಣೆಯಲ್ಲಿದೆ.

Leave A Reply