ದಿ ಕಾಶ್ಮೀರ್ ಚಿತ್ರ ವೀಕ್ಷಿಸಿದ ಯುವಕ ಬ್ರೈನ್ ಸ್ಟ್ರೋಕ್ ನಿಂದ ನಿಧನ!!

ಹಿಂದೂ ಸಿದ್ಧಾಂತಗಳನ್ನು ಪಾಲಿಸುತ್ತಿದ್ದ ವ್ಯಕ್ತಿಯೊಬ್ಬರು ದಿ ಕಾಶ್ಮೀರ್ ಸಿನಿಮಾ ವೀಕ್ಷಣೆಯ ಬಳಿಕ ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಮೃತಪಟ್ಟ ಘಟನೆಯೊಂದು ಭಾನುವಾರದಂದು ನಡೆದಿದೆ.

 

ಮೃತ ಯುವಕನನ್ನು ಅಭಿಜಿತ್ ಶಶಿಕಾಂತ್ ಶಿಂದೆ ಎಂದು ಗುರುತಿಸಲಾಗಿದ್ದು, ಅಭಿಜಿತ್ ತನ್ನ ಬಾಲ್ಯದಿಂದಲೂ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ಮಾರ್ಚ್ 27 ರಂದು ಕಾಶ್ಮೀರ್ ಫಿಲಂ ವೀಕ್ಷಿಸಲು ತೆರಳಿದ್ದರು.

ಸಿನಿಮಾ ವೀಕ್ಷಣೆಯ ಬಳಿಕ ತನ್ನ ಗೆಳೆಯರೊಂದಿಗೆ ಕೆಲ ಕಾಲ ಸಿನಿಮಾದ ಬಗ್ಗೆ ಚರ್ಚಿಸಿದ್ದ ಅಭಿಜಿತ್ ಬಳಿಕ ಮಲಗಿದ್ದರು. ಆದರೆ ಬೆಳಗ್ಗೆ ಏಳದೆ ಇದ್ದುದರಿಂದ ವೈದ್ಯರ ಮೊರೆ ಹೋದಾಗ ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.