ಕೇಂದ್ರ ಸರಕಾರದಿಂದ ಎಲ್ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ| ಪೈಪ್ಲೈನ್ ಮೂಲಕ ಪ್ರತೀ ಮನೆ-ಮನೆಗೂ ತಲುಪಲಿದೆ ಎಲ್ಪಿಜಿ ಗ್ಯಾಸ್!!
ನವದೆಹಲಿ:ಕೇಂದ್ರ ಸರಕಾರ ಎಲ್ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು,ದೇಶದಲ್ಲಿ ಗ್ಯಾಸ್ ಪೈಪ್ಲೈನ್ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಾರಂಭಿಸಿದೆ ಎಂದು ಸೋಮವಾರ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.
ಉಜ್ವಲ ಯೋಜನೆಯ ಮೂಲಕ ಪ್ರತಿ ಮನೆಗೆ ಎಲ್ಪಿಜಿ ತಲುಪಿಸಿದ ನಂತರ, ಈಗ ಕೇಂದ್ರ ಸರ್ಕಾರವು ಪೈಪ್ಲೈನ್ ಮೂಲಕ ಎಲ್ಪಿಜಿ ಪ್ರತಿ ಮನೆಗೆ ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ.ಗ್ಯಾಸ್ ಪೈಪ್ಲೈನ್ ವಿಸ್ತರಣೆ ಕಾರ್ಯದ ನಂತರ, ಭಾರತದ ಶೇ.82 ಕ್ಕಿಂತ ಹೆಚ್ಚು ಭೂಪ್ರದೇಶ ಮತ್ತು ಶೇ.98 ಜನಸಂಖ್ಯೆಗೆ ಪೈಪ್ಲೈನ್ ಮೂಲಕ ಎಲ್ಪಿಜಿ ಸರಬರಾಜು ಮಾಡಲಾಗುವುದು ಎಂದು ಅವರು ಹೇಳಿದರು.
ಈ ವರ್ಷ ಮೇ 12ರಂದು ಗ್ಯಾಸ್ ಪೈಪ್ಲೈನ್ ಅಳವಡಿಕೆ ಹಾಗೂ ಅದರ ವಿಸ್ತರಣೆ ಕಾಮಗಾರಿಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು. ಹರಾಜು ಪ್ರಕ್ರಿಯೆಯ ನಂತರ ಮೂಲಸೌಕರ್ಯಗಳ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದು,ಇದು ಒಂದು ನಿರ್ದಿಷ್ಟ ಸಮಯವನ್ನು ತೆಗೆದುಕೊಳ್ಳುತ್ತದೆ. ’11ನೇ ಸುತ್ತಿನ ಬಿಡ್ಡಿಂಗ್ ಬಳಿಕ ಶೇ.82ಕ್ಕೂ ಹೆಚ್ಚು ಭೂ ಪ್ರದೇಶ ಹಾಗೂ ಶೇ.98ರಷ್ಟು ಜನಸಂಖ್ಯೆಗೆ ಎಲ್ ಪಿಜಿ ಪೈಪ್ ಲೈನ್ ನೀಡಲಾಗುವುದು’ ಎಂದರು.