ಹಿಂದೂ ವಿರೋಧಿಗಳಿಗೆ ಕಾಂಗ್ರೆಸ್ನಲ್ಲಿ ಪಟ್ಟ : ಈ ಬಾರಿ ನಿಮ್ಮ ಪ್ರಚಾರದ ಸರಕೇನು ಎಂ.ಬಿ.ಪಾಟೀಲ್ ಅವರೇ..?
ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಗಳು ಹಿಂದುತ್ವದ ವಿರುದ್ಧ ನಿಂತವರಿಗೆ ಮಾತ್ರ! 2018 ರ ಚುನಾವಣಾ ಸಮಯದಲ್ಲಿ ವೀರಶೈವ-ಲಿಂಗಾಯಿತ ಪ್ರತ್ಯೇಕ ಧರ್ಮದ ರೂವಾರಿಯಾಗಿ ಸಮಾಜ ವಿಭಜನೆಯ ನೇತೃತ್ವ ವಹಿಸಿದ್ದ ಎಂ.ಬಿ. ಪಾಟೀಲ್ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಂದೂಗಳ ದೌರ್ಭಾಗ್ಯವಿದು! ಎಂದು ಬಿಜೆಪಿ ವ್ಯಂಗ್ಯವಾಡಿದೆ
ವೀರಶೈವ – ಲಿಂಗಾಯತ ಪ್ರತ್ಯೇಕ ಧರ್ಮ ವಿಭಜನೆಯ ವಿಫಲ ಯತ್ನದ ಸಮಯದಲ್ಲಿ ಎಂ.ಬಿ ಪಾಟೀಲ್ ನಾಡಿನ ಹಲವಾರು ಸ್ವಾಮೀಜಿಗಳ ಬಗ್ಗೆ ಅಗೌರವಯುತವಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಅಂದು ಅವರ ಬೆನ್ನಿಗೆ ನಿಂತಿದ್ದ ಸಿದ್ದರಾಮಯ್ಯ ಈಗ ಮಠಾಧೀಶರ ವಿರುದ್ಧ ಹೇಳಿಕೆ ನೀಡುತ್ತಲೇ ಎಂಬಿ ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹಿಂದೂ ವಿರೋಧಿ ಕಾಂಗ್ರೆಸ್ ಎಂದು ಕಿಡಿ ಕಾರಿದೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಅವರೇ, ಒಂದು ವಿಚಾರ ಸ್ಪಷ್ಟಪಡಿಸುವಿರಾ? ಹಿಂದೂ ಸಮಾಜದ ವಿಭಜನೆಗಾಗಿ ನೀವು ನಡೆಸಿದ ವಿಫಲ ಯತ್ನದ ಬಗ್ಗೆ ನಾಡಿನ ಜನತೆಯ ಕ್ಷಮೆ ಕೇಳುತ್ತೀರೋ ಅಥವಾ ನಿಮ್ಮ ಹಿಡನ್ ಅಜೆಂಡಾ ಜಾರಿಗಾಗಿ ಈ ಬಾರಿಯೂ ಯತ್ನಿಸುತ್ತೀರೋ? ಈ ಬಾರಿ ನಿಮ್ಮ ಪ್ರಚಾರದ ಸರಕೇನು? ಎಂದು ಪ್ರಶ್ನಿಸಿದೆ.