ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ| ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ವ್ಯಾಸಂಗದ ಅವಧಿಯಲ್ಲಿ ಬದಲಾವಣೆ!
ಬೆಂಗಳೂರು :ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ ನೀಡಲಾಗಿದ್ದು, ಇದರ ಜೊತೆಯಲ್ಲೇ ಹಲವು ಕೋರ್ಸ್ ಗಳ ಅವಧಿಯಲ್ಲೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ವಿಸ್ತರಣೆ ಮಾಡಿದೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ ನೀಡಲಾಗಿದ್ದು, ಇದರ ಜೊತೆಯಲ್ಲೇ ಹಲವು ಕೋರ್ಸ್ ಗಳ ಅವಧಿಯಲ್ಲೂ ಮಾರ್ಪಾಟಾಗಿದೆ. ಎಂಸಿಎ ಕೋರ್ಸ್ ಅವಧಿ 2 ವರ್ಷ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ವ್ಯಾಸಂಗದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ 5 ವರ್ಷಗಳ ಅವಧಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಒಟ್ಟು 54 ಖಾಸಗಿ ಅನುದಾನಿತ ಬಿ.ಇಡಿ ಕಾಲೇಜಗಳಲ್ಲಿ236 ಹಾಗೂ ಆರು ಸರ್ಕಾರಿ ಬಿ.ಇಡಿ ಕಾಲೇಜುಗಳಲ್ಲಿ 33 ಬೋಧಕರ ಹುದ್ದೆಗಳು ಖಾಲಿ ಇದ್ದು, ಕ್ರಮೇಣ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.