ಮಾಜಿ ಪ್ರಧಾನಿ ದೇವೇ ಗೌಡರ ಪತ್ನಿಗೆ ಆದಾಯ ತೆರಿಗೆ ಇಲಾಖೆಯ ನೋಟಿಸ್
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅವರಿಗೆ ಸಂಬಂಧಿಸಿದಂತ ಆಸ್ತಿ ವಿವರದ ಬಗ್ಗೆ ಮಾಹಿತಿಯನ್ನು ನೀಡುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವನ್ನುಪುತ್ರ ಮಾಜಿ ಸಚಿವ ಹೆಚ್. ಡಿ. ರೇವಣ್ಣ ದೃಢಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಐಟಿ ಅಧಿಕಾರಿಗಳಿಂದ ನನ್ನ ತಾಯಿಗೆ ನೋಟಿಸ್ ನೀಡಿದ್ದಾರೆ. ಆಸ್ತಿ ವಿವರದ ಮಾಹಿತಿ ಕೋರಿದ್ದಾರೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ನೋಟಿಸ್ ಕೊಟ್ಟಿದ್ದಾರೆ. ಆದರೆ ಇದಕ್ಕೆ ಉತ್ತರ ಕೊಡೋದು ಗೊತ್ತಿದೆ. ನನಗೆ ಕೊಟ್ಟಿದ್ದರೆ ಬೇಜಾರು ಇರಲಿಲ್ಲ ಎಂದರು.
ಒಬ್ಬ ಆರ್. ಟಿ. ಓ ಅಧಿಕಾರಿಗಳು ಕೆಲಸಕ್ಕೆ ಸೇರೋ ಮೊದಲು, ಸೇರಿದ ನಂತರ ಎಷ್ಟು ಕೋಟಿಗೆ ಇದ್ದಾರೆ ಎಂಬುದನ್ನು ಪ್ರಶ್ನಿಸೋರು ಯಾರು? ನಾವು ಕಬ್ಬು ಬೆಳೆದಿದ್ದೇವೆ. ಆಲೂಗಡ್ಡೆ ಬಳೆದಿದ್ದೇವೆ. ನಾವೇನು ಅಕ್ರಮವಾಗಿ ಕೋಟಿ ಕೋಟಿ ಸಂಪಾದಿಸಿಲ್ಲ. ಜೆಡಿಎಸ್ ಮುಖಂಡರಿಗೆ ಆಯ್ಕೆ ಮಾಡಿ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬುದಾಗಿ ಹೇಳಿದರು