ಯುವಕರಿಗೆ ಮಾದರಿಯಾದ ಹಿರಿಕರು; ಇವರು ಮಾಡಿದ ಕೆಲಸಕ್ಕೆ ಏನು ಹೇಳುತ್ತೀರಿ?
ಓದುವ ವಯಸ್ಸಿನಲ್ಲೂ ಓದದೆ ವಿದ್ಯಾರ್ಥಿಗಳು ಬೇಸರದಿಂದ ಪರೀಕ್ಷೆಗೂ ಸಿದ್ಧತೆ ನಡೆಸದೆ, ಓದು ಒಂದು ಭಾರ ಎಂದು ಭಾವಿಸುತ್ತಿರುತ್ತಾರೆ.ಆದರೆ ಇಲ್ಲೊಂದು ಘಟನೆ ವಿಧ್ಯಾರ್ಥಿಗಳಿಗೆ ಮಾದರಿಯಾಗುವಂತಿದೆ. ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಶೈಕ್ಷಣಿಕ ರಂಗಕ್ಕೆ ಮಾದರಿಯಾಗಿದ್ದಾರೆ. ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂದು ತೋರಿಸಿದ್ದಾರೆ.
ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ನಿಂಗಯ್ಯ ಬಸಯ್ಯ ಒಡೆಯರ ತಮ್ಮ 81 ವಯಸ್ಸಿನಲ್ಲಿ ಬಿಎಲ್‍ಡಿಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿಇಇ ಪರೀಕ್ಷೆಯಲ್ಲಿ ಎ. ಇಂಗ್ಲೀಷ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ.
ಸಿಂದಗಿ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಸೇವೆ ಸಲ್ಲಿಸಿದ್ದ 66 ವರ್ಷದ ಪರಸಪ್ಪ ಮಡಿವಾಳರ, ಇದೀಗ ಇಂಗ್ಲೀಷ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದಾರೆ.
ನಿವೃತಿ ಎನ್ನುವುದು ವೃತ್ತಿಗೆ ಜ್ಞಾನಕ್ಕೆ ಅಲ್ಲ , ವಯಸ್ಸು ಎನ್ನುವುದು ದೇಹಕ್ಕೆ ಕಲಿಕೆಗೆ ಅಲ್ಲ ಎಂದು ಸಾಮಾಜಕ್ಕೆ ಮಾದರಿಯಾಗಿದ್ದಾರೆ.