17 ವರ್ಷದ ವಿದ್ಯಾರ್ಥಿಯೊಂದಿಗೆ ಟೀಚರಮ್ಮನ ಲವ್ ! ಮನೆಯಿಂದ ಓಡಿಹೋಗಿ ಮದುವೆಯಾದ ಜೋಡಿ!

11 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೋರ್ವನೊಂದಿಗೆ 26 ವರ್ಷದ ಶಿಕ್ಷಕಿಯೊಂದಿಗೆ ಓಡಿ ಹೋಗಿರುವ ಘಟನೆಯೊಂದು ತಮಿಳುನಾಡಿನ ತುರೈಯೂರಿನಲ್ಲಿ ನಡೆದಿದೆ.

 

ಶಿಕ್ಷಕಿ ಶರ್ಮಿಳಾಳೊಂದಿಗೆ ಈ ವಿದ್ಯಾರ್ಥಿ ಓಡಿಹೋಗಿದ್ದಾನೆ.

ಈ ಘಟನೆ ಬೆಳಕಿಗೆ ಬಂದದ್ದಾದರೂ ಹೇಗೆ ? 11 ನೇ ತರಗತಿ ವಿದ್ಯಾರ್ಥಿ ಆಟವಾಡುತ್ತೇನೆಂದು ಹೊರಗಡೆ ಹೋಗಿದ್ದಾನೆ. ಸಾಕಷ್ಟು ಸಮಯ ಕಳೆದರೂ ಮಗ ಮನೆಗೆ ಬಂದಿಲ್ಲದಿದ್ದರಿಂದ ಆತಂಕಗೊಂಡ ಮನೆಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಇತ್ತ ಶಾಲೆಯಲ್ಲಿ ಶಿಕ್ಷಕಿ ಕೂಡಾ ನಾಪತ್ತೆ ಆಗಿರುವ ವಿಷಯ ತಿಳಿದು ಬಂದಿದೆ.

ಈ ಸಂಬಂಧ ಶಿಕ್ಷಕಿಯ ತಾಯಿಯನ್ನು ವಿಚಾರಿಸಿದಾಗ, ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಆಗಾಗ ಸೆಲ್‌ಫೋನ್‌ನಲ್ಲಿ ಮಾತನಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಈ ಆಧಾರದ ಮೇಲೆ ಪೊಲೀಸರು ಶಿಕ್ಷಕಿಯ ಫೋನ್ ಅನ್ನು ಟ್ಯಾಪ್ ಮಾಡಿದಾಗ ವೆಲಂಕಣಿ, ತಿರುವರೂರ್, ತಂಜಾವೂರು ಮತ್ತು ತಿರುಚ್ಚಿಯಂತಹ ಸ್ಥಳಗಳಲ್ಲಿ ಶಿಕ್ಷಕಿ ಓಡಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮಾಹಿತಿಯ ಮೇರೆಗೆ ಪೊಲೀಸರು ತಿರುಚ್ಚಿಯ ಎಡಮ ಪುತ್ತೂರಿನಲ್ಲಿ ಕಾರ್ಯಾಚರಣೆ ಮಾಡಿದಾಗ ಶಿಕ್ಷಕಿ ಪತ್ತೆಯಾಗಿದ್ದಾಳೆ. ಶಿಕ್ಷಕಿ ಶರ್ಮಿಳಾ ವಿದ್ಯಾರ್ಥಿಯೊಂದಿಗೆ ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದಳು.

ಕೂಡಲೇ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಶರ್ಮಿಳಾ ತಂಜಾವೂರಿನ ಪೆರುವುಡೈಯಾರ್ ದೇವಸ್ಥಾನದಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗಿರುವುದಾಗಿ ಹೇಳಿದ್ದಾಳೆ. ಘಟನೆ ಸಂಬಂಧ ಶರ್ಮಿಳಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 17 ವರ್ಷದ ಹುಡುಗನನ್ನು ಅಪಹರಿಸಿ ಮದುವೆಯಾಗಿದ್ದಕ್ಕಾಗಿ ಬಂಧಿಸಲಾಗಿದೆ.

ಪೊಲೀಸರು ವಿದ್ಯಾರ್ಥಿಯನ್ನು ಪೋಷಕರಿಗೆ ಒಪ್ಪಿಸಿ ಶರ್ಮಿಳಾರನ್ನು ತಿರುಚ್ಚಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

Leave A Reply

Your email address will not be published.