ಮಹಿಳೆಯರನ್ನು ಮಂಚಕ್ಕೆ ಕರೆಯುವುದು ‘ ಮೀ ಟೂ’ ಅಂತ ಹೇಳುವುದಾದರೆ, ನಾ ಅದನ್ನು ಮುಂದುವರಿಸುತ್ತೇನೆ: ವಿವಾದಾತ್ಮಕ ಹೇಳಿಕೆ ನೀಡಿದ ನಟ

ಮಲಯಾಳಂನ ಜನಪ್ರಿಯ ನಟ ವಿನಾಯಕನ್ ಅವರು ಇತ್ತೀಚೆಗೆ ಲೈಂಗಿಕ ವಿಷಯದ ಬಗ್ಗೆ ಮಾತನಾಡುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಎಂದರೆ ನನಗೆ ಇದೇ ಎಂದು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರ ಜೊತೆ ದೈಹಿಕ ಸಂಬಂಧದ ಬಗ್ಗೆ ಕೇಳುವ ಬಗ್ಗೆನೇ ಎಂದು ಹೇಳುವ ಮೂಲಕ ಇಂಡಸ್ಟ್ರಿಯ ಮಹಿಳೆಯರ ಕೆಂಗಣ್ಣಿಗೆ ವಿನಾಯಕನ್ ಗುರಿಯಾಗಿದ್ದಾರೆ.

 

ಇತ್ತೀಚೆಗೆ ನಟಿ ನವ್ಯಾ ನಾಯರ್ ಜೊತೆ ‘ ಒರುಥಿ’ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಈ ವಿವಾದಾತ್ಮಕ ಸ್ಟೇಟ್ ಮೆಂಟ್ ನೀಡಿದ್ದಾರೆ. ‘ ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ವಿನಾಯಕನ್ ಅವರ ಈ ಹೇಳಿಕೆ ಇದೀಗ ಮಲಯಾಳಂ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್ ಕೂಡ ವೇದಿಕೆ ಮೇಲೆಯೇ ಇದ್ದರೂ ಅವರು ವಿನಾಯಕನ್ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ನಂತರ ನಟಿ ನವ್ಯಾ ನಾಯರ್ ಆ ಸಮಯದಲ್ಲಿ ಏನೂ ಹೇಳದಿದ್ದರೂ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರು.

Leave A Reply

Your email address will not be published.