ಗೊತ್ತಿಲ್ಲದೆ ಆದ ಹೆರಿಗೆ ! ವೈದ್ಯಕೀಯ ಸಿಬ್ಬಂದಿಗಳೇ ಶಾಕ್ !

ಹೆರಿಗೆಯಾಗಲು ಹೆಣ್ಣು 9 ತಿಂಗಳು ಕಾಯುತ್ತಾಳೆ. ನವಮಾಸವನ್ನು ಅನುಭವಿಸುತ್ತಾಳೆ. ಆದರೆ ಇಲ್ಲೊಬ್ಬ ಮಹಿಳೆಗೆ ತನಗೆ ಗೊತ್ತಿಲ್ಲದೆ ಹೆರಿಗೆಯಾಗಿದೆ. ಹೆರಿಗೆಯಾಗುವ ವವರೆ ತಾನು ಗರ್ಭವತಿ ಎಂಬುದೇ ಗೊತ್ತಿಲ್ಲ ಎನ್ನುತ್ತಾಳೆ ಈ ನಾರಿ !

 

ವೇಲ್ಸ್‌ ನಿವಾಸಿ ನಿಕೋಲಾ ಥಾಮಸ್ ಎಂಬ ಮಹಿಳೆಗೆ ಬೆಳಗಿನ ಜಾವ 3 ಗಂಟೆಗೆ ಎಚ್ಚರವಾಗಿದೆಯಂತೆ, ಅದೇ ಸಮಯಕ್ಕೆ ಹೆರಿಗೆ ನೋವು ಶುರುವಾಗಿದ್ದು, ಮಗು ಜನಿಸಿದೆ. ಆದ್ರೆ ತಾನು ಗರ್ಭಿಣಿ ಅನ್ನೋದೇ ಅವಳಿಗೆ ತಿಳಿದಿರಲಿಲ್ಲವಂತೆ. 

ಬೆಳಗಿನ ಜಾವ 3 ಗಂಟೆಗೆ ಆಕಸ್ಮಿಕ ಘಟನೆ ನಡೆದಿದೆ.
36ರ ಹರೆಯದ ನಿಕೋಲಾ ಮಕ್ಕಳನ್ನು ಮಲಗಿಸಲು ಹಾಸಿಗೆಗೆ ಕರೆದುಕೊಂಡು ಹೋಗಿ ನಂತರ ತಾನೂ ಮಲಗಿದ್ದಾಳೆ. ಬೆಳಗಿನ ಜಾವ ೩ ಗಂಟೆಗೆ ನಿಕೋಲಾಗೆ ಹೊಟ್ಟೆ ನೋವು ತೀವ್ರವಾಗಿದ್ದು, ತನಗೆ ಹೆರಿಗೆ ಆಗಲಿದೆ ಅನ್ನುವುದು , ತಾನು ಗರ್ಭವತಿ ಎನ್ನುವುದು ಆಗ ಆಕೆಗೆ ಅರಿವಿಗೆ ಬಂದಿದೆ. 14 ವರ್ಷದ ಹಿರಿಯ ಮಗಳು ಆಲಿಸ್‌, ತಾಯಿಗೆ ಸಹಾಯ ಮಾಡಿದ್ದಾಳೆ.

ಕೆಲ ಹೊತ್ತಿನಲ್ಲೇ ಮಗು ಜನಿಸಿದ್ದು, ವೈದ್ಯಕೀಯ ಸಿಬ್ಬಂದಿ ಕೂಡ ಈ ಹೆರಿಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಐದು ದಿನ ಆಸ್ಪತ್ರೆಯಲ್ಲಿದ್ದ ನಿಕೋಲಾ ಎಲ್ಲಾ ಅಗತ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಮಗುವಿನೊಂದಿಗೆ ಮನೆಗೆ ಮರಳಿದ್ದಾಳೆ.

Leave A Reply

Your email address will not be published.