ಕ್ಷುಲ್ಲಕ ಕಾರಣಕ್ಕೆ ಫೋನ್ ನಲ್ಲಿ ಜಗಳ ಮಾಡಿಕೊಂಡ ಪ್ರೇಮಿಗಳು | ಸಾವಿನಲ್ಲೇ ಅಂತ್ಯಗೊಂಡ ಪ್ರೀತಿ!

ಕ್ಷುಲ್ಲಕ ಕಾರಣದಿಂದಾಗಿ ಜಗಳ ನಡೆದು ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

 

ಸಿಎಗೆ ತಯಾರಿ ನಡೆಸುತ್ತಿದ್ದ ಬಿಹಾರದ ಮುಜಾಫರ್‌ಪುರ ನಿವಾಸಿ ಅಂಜಲಿ ( 23 ವರ್ಷ) ಎಂಬ ಯುವತಿ ಜೈಪುರದಲ್ಲಿ ನೆಲೆಸಿರುವ ತನ್ನ ಗೆಳೆಯ ವಿವೇಕ್ ಜೊತೆಗೆ ಜಗಳವಾಡಿದ್ದಾಳೆ. ಅನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ಕಡೆ ತನ್ನ ಗೆಳತಿಯ ಸಾವಿನ ಸುದ್ದಿ ತಿಳಿದ ನಂತರ ಗೆಳೆಯ ವಿವೇಕ್ ಕೂಡ ಜೈಪುರದ 8 ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾನೆ.

ಬುಧವಾರ ರಾತ್ರಿ 9 ಗಂಟೆಗೆ ಪ್ರೇಮಿಗಳಾದ ಅಂಜಲಿ ಮತ್ತು ವಿವೇಕ್ ನಡುವೆ ಜಗಳವಾಗಿತ್ತು. ಸಂಭಾಷಣೆಯ ಸಮಯದಲ್ಲಿ, ಮುಜಾಫರ್‌ಪುರದ ಇವರಿಬ್ಬರಿಗೂ ಸಾಮಾನ್ಯ ಸ್ನೇಹಿತರಾಗಿರುವ ಒಬ್ಬರು ಕೂಡ ಈ ಕಾನ್ಸರೆನ್ಸ್ ಕರೆಯಲ್ಲಿ ಇದ್ದರು. ಈ ಇಬ್ಬರನ್ನು ಸಮಾಧಾನಪಡಿಸಲು ಆ ವ್ಯಕ್ತಿ ಪ್ರಯತ್ನ ಪಟ್ಟಿದ್ದಾರೆ. ಆದರೆ ಅದೆಲ್ಲವೂ ನಡೆಯಲಿಲ್ಲ. ಜಗಳದ ನಂತರ ವಿವೇಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಇತ್ತ ಕಡೆ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಘಟನೆಯ ನಂತರ ಅಂಜಲಿಯ ಸಹೋದರ ವಿವೇಕ್ ಗೆ ಕರೆ ಮಾಡಿ, ಬೆದರಿಕೆ ಹಾಕಿದ್ದಾನೆ. ಅಂಜಲಿಯ ಸಹೋದರನೊಂದಿಗೆ ಮಾತನಾಡಿದ ನಂತರ ವಿವೇಕ್ ಕೂಡಾ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.