ಸೈಕಲ್ ನಿಂದ ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದು, ಸೈಕಲ್ ಬಸ್ಸಿನಡಿಗೆ ಬಿದ್ದರೂ ಪ್ರಾಣಾಪಾಯದಿಂದ ಪಾರಾದ ಬಾಲಕ !! | ಅಪಘಾತದ ಭಯಾನಕ ವೀಡಿಯೋ ವೈರಲ್

ರಸ್ತೆ ಅಪಘಾತದ ವೀಡಿಯೋ ನೋಡಲು ತುಂಬಾನೇ ಭಯಾನಕವಾಗಿರುತ್ತದೆ. ಹಾಗೆಯೇ ಎದೆ ಝಲ್ಲೆನ್ನಿಸುವ ಅಪಘಾತದ ವೀಡಿಯೋವೊಂದು ಇದೀಗ ವೈರಲ್ ಆಗಿದೆ. ರಸ್ತೆ ಅಪಘಾತವೊಂದರಲ್ಲಿ ಪವಾಡ ಸದೃಶ ರೀತಿಯಲ್ಲಿ ಬಾಲನೊಬ್ಬನು ಪಾರಾದ ಘಟನೆ ಕೇರಳದ ಕನ್ನೂರಿನ ತಳಿಪರಂಬ ಸಮೀಪದ ಚೋರುಕ್ಕಲ ಎಂಬಲ್ಲಿ ನಡೆದಿದ್ದು, ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿ ಇದೀಗ ಭಾರೀ ವೈರಲ್ ಆಗಿದೆ.

 

ವೇಗವಾಗಿ ಬಂದು ಬೈಕ್‍ಗೆ ಬಾಲಕನು ಸೈಕಲ್‍ನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 9 ವರ್ಷದ ಬಾಲಕ ರಸ್ತೆಗೆ ಬೀಳುತ್ತಾನೆ. ಆಮೇಲೆ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿರುವುದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

https://twitter.com/safaperaje/status/1506884004246552588?s=20&t=sJUFJ1jd7WbIiaXYG4-huQ

ವೀಡಿಯೊದಲ್ಲಿ, 9 ವರ್ಷದ ಬಾಲಕ ತನ್ನ ಬೈಸಿಕಲನ್ನು ಬದಿಯಿಂದ ರಸ್ತೆಗೆ ವೇಗವಾಗಿ ನುಗ್ಗಿಸುತ್ತಾನೆ. ಆಗ ಸೈಕಲ್ ನೇರವಾಗಿ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣ ಹುಡುಗ ಗಾಳಿಯಲ್ಲಿ ಹಾರಿ ರಸ್ತೆಯ ಇನ್ನೊಂದು ಬದಿಯಲ್ಲಿ ಬಿದ್ದಿದ್ದಾನೆ. ಕೆಲ ಸೆಕೆಂಡುಗಳ ನಂತರ ಕೇರಳದ ಬಸ್ ಅವನ ಸೈಕಲ್ ಮೇಲೆ ಹರಿದಿರುವುದನ್ನು ಕಾಣಬಹುದು. ಅದೃಷ್ಟವಶಾತ್, ಬಾಲಕ ಬಸ್ಸಿನಿಂದ ಸುರಕ್ಷಿತ ದೂರದಲ್ಲಿ ಬಿದ್ದಿದ್ದಾನೆ.

ಒಂದು ವೇಳೆ ರಸ್ತೆಯ ಇನ್ನೊಂದು ಭಾಗದಲ್ಲಿ ಬೇರೆ ವಾಹನ ಬಂದಿದ್ದರೂ ಆತ ಅದರಡಿಗೆ ಸಿಲುಕುವ ಸಂಭವವಿತ್ತು. ನಂತರದಲ್ಲಿ, ಹುಡುಗನು ರಸ್ತೆಯ ಬದಿಯಲ್ಲಿ ಎದ್ದು ಗಾಬರಿಗೀಡಾಗಿದ್ದಾನೆ. ಈ ವೇಳೆ ಸ್ಥಳೀಯರು ಬಾಲಕನ ಹತ್ತಿರ ಧಾವಿಸಿ ಸಮಾಧಾನಪಡಿಸಿದ್ದಾರೆ.

Leave A Reply

Your email address will not be published.