ಮನೆದೇವ್ರ ಜಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಮಾಜಿ ಸಿಎಂ ಸಿದ್ದು !! | ಸಿದ್ದರಾಮಯ್ಯನ ನೃತ್ಯ ನೋಡಲು ಮುಗಿಬಿದ್ದ ಜನತೆ- ವೀಡಿಯೋ ವೈರಲ್
ಸದಾ ರಾಜಕೀಯದಲ್ಲಿ ಬಿಸಿಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ತಮ್ಮ ತವರೂರಿನ ಜಾತ್ರಾ ಮಹೋತ್ಸವದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹೌದು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮನೆದೇವ್ರ ಜಾತ್ರೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮಾಜಿ ಸಿಎಂ ನ ಡ್ಯಾನ್ಸ್ ನ ವೀಡಿಯೋ ಇದೀಗ ವೈರಲ್ ಆಗಿದೆ.
ಮೈಸೂರು ಜಿಲ್ಲೆಯಲ್ಲಿರುವ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮ ತಾಯಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವ ಮಾಜಿ ಸಿಎಂ, ತಮ್ಮ ಸ್ನೇಹಿತರು ಮತ್ತು ಬೆಂಬಲಿಗರ ಜೊತೆ 40 ನಿಮಿಷಗಳ ಕಾಲ ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ. ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನೃತ್ಯ ಮಾಡಿದ್ದ ಸಿದ್ದರಾಮಯ್ಯ ಈಗ 15 ವರ್ಷದ ಬಳಿಕ ಗ್ರಾಮದ ಜಾತ್ರೆಯಲ್ಲಿ ಸ್ಟೆಪ್ ಹಾಕಿದ್ದಾರೆ.
70ರ ಹರೆಯದ ಸಿದ್ದರಾಮಯ್ಯ ಅವರ ನೃತ್ಯ ನೋಡಲು ಗ್ರಾಮಸ್ಥರು ಮುಗಿ ಬಿದ್ದಿದ್ದರು. ನೂಕು ನುಗ್ಗಲು ಮಧ್ಯೆ ಸಿದ್ಧರಾಮಯ್ಯ ನೃತ್ಯ ಮಾಡಿ ಜನರನ್ನು ರಂಜಿಸಿದ್ದಾರೆ. ಬುಧುವಾರದಂದು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯನವರು ಮಾಧುಸ್ವಾಮಿ ಅವರಿಗೆ ಪ್ರತಿಕ್ರಿಯಿಸುತ್ತಾ ‘ನಮ್ ಮನೆ ದೇವ್ರು ಸಿದ್ದರಾಮೇಶ್ವರ, ನಮ್ ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ, ನಮ್ ಮನೆ ದೇವ್ರು ಸಿದ್ದರಾಮೇಶ್ವರ ಎಂದು ಹೇಳಿದ್ದರು.