ಸುಳ್ಯ : ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ!

ಸುಳ್ಯ: ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜು
ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

 

ನಾಪತ್ತೆಯಾದ ವಿದ್ಯಾರ್ಥಿನಿ ದ್ವಿತೀಯ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ ಮದೀಹಾ (20)ಎಂದು ತಿಳಿದು ಬಂದಿದ್ದು,ಉತ್ತರ ಪ್ರದೇಶದ ತೋಲಾ ಸಗರಿ ಗ್ರಾಮದ
ನಿವಾಸಿ ಮದೀಹಾ ಮಾ.20ರಂದು ರಾತ್ರಿ ನಾಪತ್ತೆಯಾಗಿರುತ್ತಾರೆ.

ಮದೀಹಾ ಹಾಗೂ ಆಕೆಯ ಸಹೋದರ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಹೋದರ ಮೂರನೇ ವರ್ಷದ ಬಿ.ಎ.ಎಂ.ಎಸ್ ಹಾಗೂ ಮದೀಹಾ ದ್ವಿತೀಯ ಬಿ.ಎ.ಎಂ.ಎಸ್ ವಿದ್ಯಾರ್ಥಿನಿ. ಅಣ್ಣನಿಗೆ ಸಹೋದರಿ ಬಗ್ಗೆ ಸುಳಿವು ಸಿಗದ ಕಾರಣ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಮಾ. 20 ರಂದು ಅಪರಾಹ್ನ 2.30ರ ವೇಳೆ ಹಾಸ್ಟೆಲ್‌ನಿಂದ ಬ್ಯಾಗ್ ಹಿಡಿದುಕೊಂಡು ಮದೀಹಾ ಹೋಗುತ್ತಿರುವುದು ಕಂಡು ಬಂದಿದೆ.

ಇದೀಗ ಕಾಲೇಜು ಮುಖ್ಯಸ್ಥರು ನಾಪತ್ತೆ ಕೇಸ್
ದಾಖಲಿಸಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.