ಅವರ ದೇವರಿಗೆ ಹಿಂದೂ ಮಟನ್‌ಸ್ಟಾಲ್ ಆಗಲ್ಲ, ಅವರ ದೇವರು ಒಪ್ಪಿಕೊಳ್ಳದನ್ನು ನಮ್ಮ ದೇವರು ಒಪ್ಪುತ್ತಾರಾ?- ಸಿ.ಟಿ.ರವಿ
ಚಿಕ್ಕಮಗಳೂರು: ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಜಿಜ್ಞಾಸೆಯ ನಡುವೆ ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆಯೊಂದನ್ನು ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ ಅವರು,ಹಿಂದೂಗಳ ಮಟನ್ ಸ್ಟಾಲ್‍ನಲ್ಲಿ ಮುಸ್ಲಿಮರು ಮಟನ್ ತೆಗೆದುಕೊಳ್ಳುತ್ತಾರೆ. ಆದರೆ ಅವರ ದೇವರಿಗೆ ಹಿಂದೂ ಮಟನ್ ಸ್ಟಾಲ್ ಮಾಂಸ ಆಗಲ್ಲ. ಅವರ ದೇವರಿಗೆ ಒಪ್ಪಿಕೊಳ್ಳದನ್ನು ನಮ್ಮ ದೇವರು ಒಪ್ಪಿಕೊಳ್ಳುತ್ತಾ ಎಂದು ಪ್ರಶ್ನಿಸಿದ್ದಾರೆ.
ನಮಗೆ ಉದಾರತೆಯ ಪಾಠ ಯಾರೂ ಹೇಳುವುದು ಬೇಡ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಎಂದು ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರದ ನಿಷೇಧವನ್ನು ಅವರು ಸಮರ್ಥಿಸಿಕೊಂಡರು.
ಉಡುಪಿಯ ಗಂಗೊಳ್ಳಿಯಲ್ಲಿ ಹಿಂದೂಗಳಿಂದ ಮೀನು ತೆಗೆದುಕೊಳ್ಳಬೇಡಿ ಎಂದು ಘೋಷಿಸಿದಾಗ ಯಾರೂ ಚಕಾರವೆತ್ತಿಲ್ಲ.ಉದಾರತೆ ಮತ್ತು ಜಾತ್ಯಾತೀತ ಪದ ಹಿಂದೂಗಳಿಗೆ ಮೋಸ ಮಾಡಲು ಇಟ್ಟಿರುವುದು. ಅಂಬೇಡ್ಕರ್ ಸಂವಿಧಾನದಲ್ಲಿ ಜಾತ್ಯಾತೀತ ಪದ ತಂದಿಡಲಿಲ್ಲ. ಕಾಂಗ್ರೆಸ್‍ನವರು ತುರ್ತು ಪರಿಸ್ಥಿತಿಯಲ್ಲಿ ತಂದಿಟ್ಟರು. ಈ ಶಬ್ಧ ಇರಬೇಕೋ ಬೇಡವೋ ಎಂಬ ಚರ್ಚೆಯಾಗಬೇಕು ಎಂದರು.
ಮಹಾತ್ಮ ಗಾಂಧಿ ಹಿಂದೂಗಳ ಭಜನೆಯಲ್ಲಿ ಈಶ್ವರ ಅಲ್ಲ ತೇರೆನಾಮ್ ಅಂತ ಸೇರಿಸಿ ಹೇಳಿದರು. ಎಲ್ಲಾ ದೇವಸ್ಥಾನಗಳಲ್ಲಿ ಈ ಭಜನೆ ಹೇಳುತ್ತೇವೆ. ಯಾವುದಾದರೂ ಒಂದು ಮಸೀದಿಯಲ್ಲಿ ಒಬ್ಬ ಮೌಲ್ವಿ, ಮುಸ್ಲಿಂ ಧರ್ಮಗುರು ದೇವನೊಬ್ಬ ನಾಮ ಹಲವು ಅಂತ ಹೇಳಿದ್ದು ಕೇಳಿದ್ದೀರಾ? ಅವರಿಗೆ ಬಹುತ್ವವನ್ನು ಒಪ್ಪಿಕೊಳ್ಳಲು ಆಗಲ್ಲ. ಹಾಗಾದರೆ ನಮಗೆ ಯಾಕೆ ಮೋಸ ಮಾಡಬೇಕು ಎಂದು ಪ್ರಶ್ನಿಸಿದರು.
ಮುಸ್ಲಿಮರು ಕಮ್ಯೂನಲ್ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಇಸ್ಲಾಂನಲ್ಲಿ ಜಾತ್ಯಾತೀತ ಪದಕ್ಕೆ ಅರ್ಥ ಇದೆಯಾ. ಅರ್ಥ ಇದೆ ಎನ್ನುವ ಹಾಗಿದ್ದರೆ ಐದು ಬಾರಿ ನಮಾಜ್‍ನಲ್ಲಿ ಏನಂತ ಕೂಗುತ್ತಾರೆ. ಅಲ್ಲಾ ಒಬ್ಬನೇ ದೇವರು ಅಂತ ಕೂಗುತ್ತಾರಾ ಇಲ್ವಾ? ಅಲ್ಲಾ ಒಬ್ಬನೇ ದೇವರು ಎಂದು ಅಲ್ಲಿ ಕೂಗುತ್ತಾರೆ. ರಾಮ, ಈಶ್ವರ ಕೃಷ್ಣ ಹುಟ್ಟಿದ ಜಾಗದಲ್ಲಿ ಅದನ್ನು ಕೇಳಿಸಿಕೊಂಡು ನಾವು ಸುಮ್ಮನಿರಬೇಕಾ? ನಾವು ಜಾತ್ಯಾತೀತ ಅವರು ಕಮ್ಯೂನಲ್ ಆಗಬೇಕಾ ಎಂದರು
ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬಾರದು, ಹಿಂದೂಗಳು ಅವರ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕು. ನಮ್ಮ ಮೂಲ ನಂಬಿಕೆ ದೇವನೊಬ್ಬ ನಾಮ ಹಲವು. ಅದು ಇಸ್ಲಾಂನಲ್ಲೂ ಇದ್ದಿದ್ದರೇ ಜಗಳನೇ ಬರುತ್ತಿರಲಿಲ್ಲ. ಶೇ.90ರಷ್ಟು ಹಿಂದೂಗಳು ಇರುವ ಕಡೆ ಶೇ.10ರಷ್ಟು ಇರುವ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಶೇ.50ರಷ್ಟು ಹಿಂದೂ ಶೇ.50ರಷ್ಟು ಮುಸ್ಲಿಂ ಇವರು ಕಡೆ ಹಿಂದೂಗಳು ಸುರಕ್ಷಿತರಾಗಿದ್ದಾರಾ ಎಂಬ ಸತ್ಯ ತಿಳಿಯದೇ ಕಾಂಗ್ರೆಸ್ ಸೋಗಲಾಡಿ ರಾಜಕಾರಣ ಮಾಡಬಹುದು. ನಾವು ಅಂತಹ ರಾಜಕಾರಣ ಮಾಡುವುದಿಲ್ಲ ಎಂದು ಕಿಡಿಕಾರಿದರು