ಮುಸ್ಲಿಂ ಯುವಕನ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಪೋಸ್ಟ್ | ಹಿಂದೂ ಯುವಕ ಅರೆಸ್ಟ್

ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಪೋಸ್ಟ್ ಮಾಡಿದ ಯುವಕನನ್ನು ಪೊಲೀಸರು ಇಂದು(ಗುರುವಾರ) ಬಂಧಿಸಿದ್ದಾರೆ.

 

ಪೊಲೀಸರು ಈತನನ್ನು ಬೆಳಗಾವಿ ಜಿಲ್ಲೆಯ ಸಿಂದಿಕುರಬೇಟ ಗ್ರಾಮದಲ್ಲಿ ಬಂಧಿಸಿದ್ದಾರೆ. ಸಿದ್ದಾರೂಢ ಎಂಬಾತನೇ ಬಂಧಿತ ಯುವಕ.

ಮುಸ್ತಾಕ್ ಅಲಿ ಹೆಸರಿನಲ್ಲಿ ಹರ್ಷ ಕೊಲೆಗೆ ಪ್ರತೀಕಾರವಾಗಿ ಸಿದ್ದಾರೂಢ ಪೋಸ್ಟ್ ಮಾಡಿದ್ದು, ಶಿವಮೊಗ್ಗದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ ಅವರಿಗೂ ಸಹ ಸಿದ್ಧಾರೂಢ ಪೋಸ್ಟ್ ಮಾಡಿದ್ದನು.

ಈತನ ವಿರುದ್ಧ ಬಾಗಲಕೋಟೆ ಸಿಇಎನ್ ಪೋಲಿಸರಿಗೆ ದೂರು ದಾಖಲು ಮಾಡಲಾಗಿತ್ತು. ಜೊತೆಗೆ ಶಿವಮೊಗ್ಗದಲ್ಲೂ ಎಂಎಲ್ಸಿ ಅರುಣ ಅವರಿಂದ ದೂರೊಂದು ದಾಖಲಾಗಿತ್ತು. ಈ ದೂರು ಆಧರಿಸಿ ಬಾಗಲಕೋಟೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ನ್ಯಾಯಾಂಗ ವಶಕ್ಕೆ ಕೊಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಪೊಲೀಸರೂ ಕೂಡ ಪ್ರತ್ಯೇಕ ತನಿಖೆಯನ್ನು ಮಾಡುತ್ತಿದ್ದಾರೆ.

Leave A Reply

Your email address will not be published.