ಎಡಮಂಗಲ : ಮನೆಗೆ ನುಗ್ಗಿದ ಕಳ್ಳರು ,ನಗ-ನಗದು ದೋಚಿ ಪರಾರಿ

ಕಡಬ: ಎಡಮಂಗಲ ರೈಲ್ವೆ ಗೇಟ್ ಬಳಿಯಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ ಮತ್ತು ಹಣ ದೋಚಿ ,ಪಕ್ಕದ ಅಂಗಡಿಯೊಂದರ ಬಾಗಿಲು ಮುರಿದು ಪರಾರಿಯಾದ ಘಟನೆ ಕಳೆದ ರಾತ್ರಿ ನಡೆದಿದೆ.

 

ಎಡಮಂಗಲ ರೈಲ್ವೆ ಗೇಟ್ ಬಳಿಯ ನಿವಾಸಿ ಜಗದೀಶ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬಾಗಿಲು ಮುರಿದು ಮನೆಯ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನ, ನಗದು ಕೊಂಡೊಯ್ದು ದಾಖಲೆಗಳನ್ನು ರಸ್ತೆಯಲ್ಲಿ ಬಿಸಾಡಿ ಹೋಗಿರುವುದಾಗಿ ತಿಳಿದುಬಂದಿದೆ.

ಬಳಿಕ ಜಗದೀಶ್ ಎಂಬವರ ಅಂಗಡಿಯ ಶೆಟರ್ ಮುರಿದು ಹಣಕ್ಕಾಗಿ ಹುಡುಕಾಡಿರುವುದಾಗಿ ತಿಳಿದು ಬಂದಿದೆ.ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ.

Leave A Reply

Your email address will not be published.