ಈ ಇಸ್ಲಾಂ ರಾಷ್ಟ್ರದಲ್ಲಿ ಮನೆಯ ಗೋಡೆಯ ಮೇಲೆ ಪತ್ನಿಯ ಫೋಟೋ ಹಾಕಲೇಬೇಕು!
ಪತಿ ಪತ್ನಿಯ ನಡುವಿನ ಸಂಬಂಧ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ದಂಪತಿ ನಡುವಿನ ಸಂಬಂಧ ಚೆನ್ನಾಗಿದ್ರೆ ಅದು ಸುಖ ಸಂಸಾರ ಆಗಿರುತ್ತದೆ. ಸುಖಿಸಂಸಾರ ಅಂದ್ರೆ ರರಲ್ಲಿ ಪ್ರೀತಿ, ಸಮರ್ಪಣೆ ಅರ್ಥಮಾಡಿಕೊಳ್ಳುವಿಕೆ ಅಂತಹ ಅಂಶಗಳೆಲ್ಲ ಒಳಗೊಂಡಿರುತ್ತದೆ. ಆದರೆ ಕೆಲ ಮನೆಗಳಲ್ಲಿ ದಂಪತಿ ನಡುವೆ ಹೊಂದಾಣಿಕೆ ಇರಲ್ಲ, ಪತ್ನಿಗೆ ಸರಿಯಾದ ಗೌರವ ಸಿಕ್ಕಿರಲ್ಲ. ಮಹಿಳೆ ಎಂಬ ಕಾರಣಕ್ಕೆ ಎಷ್ಟೋ ಅವಕಾಶಗಳಿಂದ ವಂಚಿತರಾಗಿರುವ ಉದಾಹರಣೆಗಳೂ ಇವೆ.
ಇನ್ನೂ ಕೆಲವು ಭಾಗಗಳಲ್ಲಿ ಪುರುಷ ತಮ್ಮ ಹೆಸರಿನ ಜೊತೆ ಪತ್ನಿಯ ಹೆಸರು ಸೇರಿಸಿಕೊಳ್ಳುತ್ತಾರೆ. ಮನೆ ಮುಂದೆಯೂ ಮೊದಲು ಪತ್ನಿಯ ಹೆಸರು ಇರಿಸಲಾಗುತ್ತದೆ.
ಒಂದು ಮುಸ್ಲಿಂ ರಾಷ್ಟ್ರದಲ್ಲಿ ವಿಚಿತ್ರ ಪದ್ಧತಿ ಇದೆ. ಇಲ್ಲಿ ವ್ಯಕ್ತಿ ತನ್ನ ಮನೆಯ ಗೋಡೆ ಮೇಲೆ ಪತ್ನಿಯ ಫೋಟೋ ಹಾಕಬೇಕು. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳು ಇಲ್ಲದಿದ್ದರೂ, ಬಹುವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಸ್ಲಿಂ ರಾಷ್ಟ್ರವಾಗಿದ್ದರಿಂದ ಬಹುಪತ್ನಿತ್ವ ಸಹ ಇದೆ.
ಇಲ್ಲಿ ಎಷ್ಟೇ ಮದುವೆಯಾದರೂ ಮನೆಯ ಗೋಡೆಯ ಮೇಲೆ ಪತ್ನಿಯರ ಫೋಟೋ ಹಾಕಲಾಗುತ್ತದೆ. ಈ ದೇಶದ ಹೆಸರು ಬ್ರುನೈ.
ಭಾರತದಂತೆ ಇದು ಸಹ ಬ್ರಿಟಿಷ್ ಆಳ್ವಿಕೆಯನ್ನು ಕಂಡಿದೆ. 1 ಜನವರಿ 1984ರಲ್ಲಿ ಸ್ವತಂತ್ರ ಪಡೆದ ಬ್ರುನೈ ದೇಶದಲ್ಲಿ ರಾಜರ ಆಳ್ವಿಕೆ ನಡೆಯುತ್ತಿದೆ. ಈ ದೇಶ ತನ್ನ ಹಲವು ವಿಚಿತ್ರ ಕಾನೂನುಗಳಿಂದ ಆಗಾಗ ಸುದ್ದಿಯಲ್ಲಿರುತ್ತದೆ. ಇಲ್ಲಿಯ ರಾಜನೇ ಆರು ಮದುವೆಯಾಗಿದ್ದಾನೆ.