ಲಕ್ಷಾಂತರ ಜನರಿಗೆ ದಾರಿದೀಪವಾದ ಗೀತಾ 18 (ಭಗವದ್ಗೀತೆ ಕೋರ್ಸ್)

ಆ ದಿನಗಳು‌ ನನಗಿನ್ನೂ ಚೆನ್ನಾಗಿ‌ ನೆನಪಿದೆ, ಕೊರೊನಾದಿಂದಾಗಿ ಇಡೀ ದೆಶದ ಜನತೆಯೇ ತತ್ತರಿಸಿ ಹೋಗಿತ್ತು, ಮನೆಯಲ್ಲೇ ಬಂಧಿಯಾಗಿ ತಿಂಗಳುಗಟ್ಟಲೇ ಕಳೆಯಬೇಕಾದ ಪರಿಸ್ಥಿತಿ, ಯಾವಾಗ ಈ ಕೊರೊನಾ ಕೊನೆಯಾಗಿ ಮತ್ತೆ ಜನ ಜೀವನ ಮೊದಲಿನಂತಾಗುವುದೋ ಎಂದು ಕಾತರಿಸುತ್ತದ್ದ ದಿನಗಳು, ಪ್ರತಿ ದಿನ‌ ಸಾವು‌ನೋವಿನ ಸುದ್ದಿಯಿಂದಾಗುತ್ತಿದ್ದ ಆತಂಕ, ಒತ್ತಡ, ಮನೆಯಲ್ಲೇ ಕುಳಿತು ಏನು ಮಾಡಬೇಕಂತ ತೋಚದೇ ಖನ್ನತೆಗೆ ಒಳಗಾಗುವಂತಹ ಪರಿಸ್ಥಿತಿ ಯಲ್ಲಿದ್ದಾಗ ಯಾವುದೋ ಒಂದು ವಾಟ್ಸಪ್ ಗ್ರೂಪಿನಲ್ಲಿ ಬಂದ 18 ದಿವಸಗಳ ಭಗವದ್ಗೀತೆ ಕೋರ್ಸ್ ಲಿಂಕ್ ಒತ್ತಿ ಅದಕ್ಕೆ ಸೇರಿದೆ ಸುಮ್ಮನೆ ಭಗವದ್ಗೀತೆಯ ಲ್ಲಿ ಏನಿದೆ ಅಂತ ನೋಡೋಣ ಅಂತ. ಕ್ಲಾಸ್ ಗೆ ಸೇರಿದ ಮೊದಲ‌ ದಿನವೇ ನನ್ನಲ್ಲಿ‌‌ ಏನೋ ಒಂದು ಸಕಾರಾತ್ಮಕವಾದ ಬದಲಾವಣೆ ಯಾಗಿರುವುದನ್ನು ನಾನು ಗಮನಿಸಿದೆ. ಬರ್ತಾ ಬರ್ತಾ ಎಷ್ಟು ಆಸಕ್ತಿ ಮೂಡಿತೆಂದರೆ ಪ್ರತಿದಿನವೂ ತಪ್ಪದೇ ಆ ಸಮಯಕ್ಕಾಗಿ‌ ಕಾಯ್ತಾ‌ ಇದ್ದೆ. 18 ದಿವಸ ಮುಗಿಯುವುದೊರೊಳಗೆ ನಾನು ನಾನಾಗಿರಲಿಲ್ಲ. ನನಗರಿವಿಲ್ಲದಂತೆ ನನ್ನಲ್ಲಿ‌ ಪರಿವರ್ತನೆಯಾಗಿತ್ತು. ಜೀವನದಲ್ಲಿ ಆಶಾ ಭಾವನೆ, ಆತ್ಮವಿಶ್ವಾಸ ಮೂಡಿತ್ತು. ಬದುಕಿಗೆ ಅರ್ಥ ದೊರಕಿತು. ಜೀವನದ ಉದ್ದೇಶ ತಿಳಿಯಿತು. ಹೌದು ಇದು ಮಂಗಳೂರಿನ ಇಸ್ಕಾನ್ ನ ಶೋಭ ಮಯ್ಯ ಅವರ ಭಗವದ್ಗೀತೆ ಕ್ಲಾಸ್ ನ್ನು ಮುಗಿಸಿದ ಮೇಲೆ ನನಗಾದ ಅನುಭವ, ಅಂದಿನಿಂದ ಇಂದಿನವರೆಗೂ ನಾನು ಅವರ ಎಲ್ಲಾ ಕ್ಲಾಸ್ಗಳಿಗೂ ತಪ್ಪದೇ ಹಾಜರಾಗುತ್ತೇನೆ. ಇದು ನನ್ನೊಬ್ಬನ ಅನುಭವವಲ್ಲ, ಸಾವಿರಾರು ಜನರ ಅನುಭವ. ಭಗವದ್ಗೀತೆಯಲ್ಲಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭಾವಾದ ಅಗಾಧವಾದ ಜ್ಞಾನ ವಿದೆ ಅನೋದು ಇವರ ಕ್ಲಾಸಿಂದ ನಮಗೆ ಗೊತ್ತಾಯಿತು.

ಕಿರುಪರಿಚಯ….

ಭಕ್ತಿಯೋಗ ಮತ್ತು ಆಧ್ಯಾತ್ಮಿಕ ಚಿಂತಕರಾದ ಮಂಗಳೂರಿನ ಶ್ರೀಮತಿ ಶೋಭಾ ಮಯ್ಯಾ. ಇವರು ಹಲವು ವರುಷಗಳಿಂದ ದೇಶ ಮತ್ತು ವಿದೇಶದಲ್ಲಿ ಭಾರತದ ಸನಾತನ ಧರ್ಮದ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆ ಯಥಾರೂಪ ಮತ್ತು ಶ್ರೀಮದ್ಭಾಗವತಮ್ ನ ಅಧ್ಯಯನ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡುದ್ದು ಪ್ರಸ್ತುತ ಕರ್ನಾಟಕದ, ಮಂಗಳೂರಿನಲ್ಲಿ ನೆಲೆಸಿರುವರು. ಮಂಗಳೂರಿನ ನಂತೂರು,ಕದ್ರಿ ಟೋಲ್ಗಟ್ ಸಮೀಪವಿರುವ ಶ್ರೀ ಶ್ರೀ ರಾಧಾ ಗೋವಿಂದ ಮಂದಿರದ ಗೀತಾ 18 ಕೋರ್ಸ್ ನಲ್ಲಿ ಕೆಲವು ವರುಷಗಳಿಂದ ಆನ್‌ಲೈನ್ (ತರಗತಿಯ) ಮುಖಾಂತರ ಭಗವದ್ಗೀತೆ ಶ್ಲೋಕ,ಅನುವಾದ ಮತ್ತು ಭಾವಾರ್ಥವನ್ನು ಸಂಕ್ಷಿಪ್ತವಾಗಿ ವಿವರಿಸಿ, ಉತ್ತಮ ರೀತಿಯಲ್ಲಿ ಕನ್ನಡದಲ್ಲಿ ಬೋಧನೆ ನೀಡುತ್ತಿರುತ್ತಾರೆ.
ಶ್ರೀಮತಿ ಶೋಭಾ ಮಯ್ಯನವರ ಮಾರ್ಗದರ್ಶನದಲ್ಲಿ ನಾಡಿನ ಜನತೆ ಮಾತ್ರವಲ್ಲದೆ ದೇಶ, ವಿದೇಶದ ಜನರು ಈ ಒಂದು ಆನ್‌ಲೈನ್ (ತರಗತಿಯ) ಭಗವದ್ಗೀತೆ ಮತ್ತು ಶ್ರೀಮದ್ಭಾಗವತಮ್ ಸಂಪೂರ್ಣ ಅಧ್ಯಾಯನವನ್ನು ಉಚಿತವಾಗಿ ಪಡೆಯುತಿದ್ದಾರೆ.
ಇಸ್ಕಾನ್ ಮಂಗಳೂರು ಪ್ರತಿ ತಿಂಗಳು 18 ದಿನಗಳ ಭಗವದ್ಗೀತೆಯ ಹೊಸ ಬ್ಯಾಚ್ ನಡೆಸುತ್ತಾ‌ ಬಂದಿದ್ದು ಲಕ್ಷಾಂತರ ಜನರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಶೋಭಾರವರು ಇಲ್ಲಿ ಕನ್ನಡದಲ್ಲಿ ಬೋಧಿಸುತ್ತಿದ್ದು, ಸರಳವಾಗಿ ಭಗವದ್ಗೀತೆಯನ್ನು ಕಲಿಸುವ ಇವರ ಕ್ಲಾಸ್ ಎಲ್ಲರನ್ನು ಮಂತ್ರಮುಗ್ದಗೊಳಿಸಿದೆ. ಸ್ಪಷ್ಟವಾಗಿ ಶ್ಲೋಕ ಪಠಿಸುವ ರೀತಿ, ನಿರರ್ಗಳವಾಗಿ ಮಾತನಾಡುವ ಇವರ ಸ್ಪಷ್ಟ ಕನ್ನಡ ಹಲವಾರು ಜನರ ಪ್ರಶಂಸೆಗೆ ಪಾತ್ರವಾಗಿದೆ. ಇವರ ಭಗವದ್ಗೀತೆ ಕ್ಲಾಸ್ ತುಂಬಾ ಜನಪ್ರಿಯತೆ ಗಳಿಸಿದೆ. ತುಂಬಾ ಜನರಿಗೆ ಇವರ ಕ್ಲಾಸ್ ದಾರಿದೀಪವಾಗಿದೆ ಎಂದರೆ ತಪ್ಪಾಗಲಾರದು. ಇವರ ಕ್ಲಾಸ್ನ ಪ್ರಭಾವದಿಂದಾಗಿ ಈಗಾಗಲೇ ಸಾವಿರಾರು ಜನ ಭಗವದ್ಗೀತೆಯ ವಿತರಣಾ ಕಾರ್ಯ ದಲ್ಲಿ ತೊಡಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ಶಿಕ್ಷಣವನ್ನು ನಾನು ಕೂಡ ಪಡೆದೆಕೊಂಡಿರುವೆ.ಇವರ ಉನ್ನತ ಶಿಕ್ಷಣಕ್ಕೆ ನಾನು ಸದಾ ಚಿರರುಣಿಯಾಗಿರುತೇನೆ. ಇದು ನನ್ನ ಸ್ವಂತ ಅನುಭವ.ನನ್ನ ಈ ಅನುಭವವನ್ನು ನಾನು ನಿಮ್ಮಲಿ ಈ ಪತ್ರಿಕೆಯ ಮೂಲಕ ಹಂಚಿಕೊಳುತಿದ್ದೇನೆ…

ಮಹೇಶ್ ಕುಮಾರ್,
ಮಂಗಳಾದೇವಿ, ಮಂಗಳೂರು.

Leave A Reply

Your email address will not be published.