ಸದ್ದಿಲ್ಲದೇ ಕತ್ತಲ ಕೋಣೆಗೆ ಸರಿದ ಸ್ವಯಂ ಘೋಷಿತ ಸಮಾಜ ಸೇವಕ!! ವಿದ್ಯಾರ್ಥಿನಿಯರಿಗೆ ಬ್ಲಾಕ್ ಮೇಲ್ ಪ್ರಕರಣದಲ್ಲಿ ಶಾಸಕ ಖಾದರ್ ಆಪ್ತ ಬಂಧನ
ಹೆಲ್ಫ್ ಇಂಡಿಯಾ ಹೆಸರಿನಲ್ಲಿ ಜಿಲ್ಲೆಯ ಎಲ್ಲೆಡೆ ತನ್ನ ಒಳ್ಳೆಯ ಮುಖವನ್ನು ಪರಿಚಯ ಮಾಡಿಕೊಂಡು, ಗಣ್ಯರ, ಜನಪ್ರತಿನಿಧಿಗಳೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯೊಬ್ಬ ಸದ್ದು ಸುದ್ದಿ ಇಲ್ಲದೆ ಕತ್ತಲ ಕೋಣೆಯೊಳಗೆ ಸರಿದಿದ್ದಾನೆ.
ಪಿಯುಸಿ ಯುವತಿಯರ ಬ್ಲಾಕ್ ಮೇಲ್ ಹಾಗೂ ಅನೈತಿಕ ಚಟುವಟಿಕೆಗಳಿಗೆ ಯುವತಿಯರನ್ನು ಪೂರೈಸಿ ಹಣ ಪಡೆದುಕೊಳ್ಳುತ್ತಿದ್ದ ಆರೋಪದ ಮೇಲೆ ಮಾಜಿ ಸಚಿವ, ಶಾಸಕ ಯುಟಿ ಖಾದರ್ ಆಪ್ತನೆನ್ನಲಾದ ಸ್ವಯಂ ಘೋಷಿತ ಸಮಾಜ ಸೇವಕ ರಾಝಿಕ್ ಉಳ್ಳಾಲ ಎಂಬಾತನನ್ನು ಪೊಲೀಸರು ಮೂರು ದಿನಗಳ ಹಿಂದೆ ಬಂಧಿಸಿದ್ದು, ಪ್ರಭಾವಿ ಎನ್ನುವ ಕಾರಣಕ್ಕೆ ಸುದ್ದಿಯನ್ನು ಪ್ರಚಾರ ಮಾಡದೆ ಮುಚ್ಚಿಟ್ಟಿದ್ದು, ಅಂತೂ ವಿಚಾರ ಬಯಲಾಗಿದೆ.
ಘಟನೆ ವಿವರ: ಅತ್ತಾವರದ ನಂದಿಗುಡ್ಡೆ ಎಂಬಲ್ಲಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಹದಿಹರೆಯದ ವಿದ್ಯಾರ್ಥಿಗಳನ್ನು ಬೆದರಿಸಿ ಬ್ಲಾಕ್ ಮೇಲ್ ನಡೆಸಿ ಅನೈತಿಕ ಚಟುವಟಿಕೆಗಳಿಗೆ ಬಳಸುತ್ತಿದ್ದ ಬಗ್ಗೆ ಇಬ್ಬರು ಯುವತಿಯರು ನೀಡಿದ ದೂರಿನ ಅನ್ವಯ ಪೊಲೀಸರು ದಾಳಿ ನಡೆಸಿ ಒಟ್ಟು 15 ಮಂದಿ ಆರೋಪಿಗಳನ್ನು ಬಂಧಿಸಿದ್ದರು.ಸದ್ಯ ಎಲ್ಲಾ ಸಾಕ್ಷ್ಯ ಗಳ ಆಧಾರದ ಮೇಲೆ ರಾಝಿಕ್ ಉಳ್ಳಾಲ ನನ್ನು ಬಂಧಿಸಿದ್ದಾರೆ.
ಈ ಮೊದಲು ತನಗೆ ಉಳ್ಳಾಲದ ನಟೋರಿಯಸ್ ಗ್ಯಾಂಗ್ ಒಂದರಿಂದ ಬೆದರಿಕೆ ಇದ್ದು, ಈ ಹಿನ್ನೆಲೆಯಲ್ಲಿ ರಕ್ಷಣೆಗೆ ರಿವಲ್ವಾರ್ ಹಿಡಿದು ತಿರುಗಾಡುತ್ತಿದ್ದ ರಾಝಿಕ್, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ, ಉನ್ನತ ಮಟ್ಟದ ಅಧಿಕಾರಿಗಳ, ಪ್ರಭಾವಿ ಜನಪ್ರತಿನಿದಿಗಳ ಜೊತೆ ನಿಂತ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ತನಗೆ ಎಲ್ಲರೂ ಪರಿಚಯ ಇರುವಂತೆ ಬಿಂಬಿಸುತ್ತಿದ್ದ.