ಬೆಳ್ತಂಗಡಿ: ಮುಸ್ಲಿಂ ಸಂಘಟನೆ ಕರೆ ನೀಡಿದ್ದ ಬಂದ್ ನ ಹಿನ್ನೆಲೆ!! ಅಪೋಲೋ ಟಯರ್ ಶಾಪ್ ನ ಆರು ಮಂದಿ ಹಿಂದೂ ಯುವಕರು ಕೆಲಸದಿಂದ ವಜಾ!!
ಬೆಳ್ತಂಗಡಿ: ಹಿಜಾಬ್ ವಿವಾದದ ಬಗೆಗಿನ ಹೈಕೋರ್ಟ್ ತೀರ್ಪಿನ ವಿರುದ್ಧ ಮಾರ್ಚ್ 17 ರಂದು ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳು ಸ್ವಯಂ ಪ್ರೇರಿತ ಬಂದ್ ಮಾಡಲು ಕರೆ ನೀಡಿದ್ದು, ಮುಸ್ಲಿಂ ಸಮುದಾಯ ಉತ್ತಮವಾಗಿ ಪ್ರತಿಕ್ರಿಯೆ ನೀಡಿತ್ತು.
ಆದರೆ ಬೆಳ್ತಂಗಡಿ ಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಪೋಲೋ ಟೈಯರ್ ಶಾಪ್ ಮಾತ್ರ ಅರ್ಧ ಬಾಗಿಲು ತೆರೆದು ವ್ಯಾಪಾರ ನಡೆಸಿದ ಬಗ್ಗೆ ಸುದ್ದಿ ಹಬ್ಬಿದ್ದು,ಇದಾಗಿ ಕೆಲ ಹೊತ್ತಿನಲ್ಲೇ ಅಲ್ಲಿ ಕೆಲಸಕ್ಕಿದ್ದ ಹಿಂದೂ ಯುವಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಈ ಬಗ್ಗೆ ಅಂಗಡಿ ಮಾಲೀಕ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದು, ಸುದ್ದಿ ಎಲ್ಲೆಡೆ ಪ್ರಚಾರವಾಗುತ್ತಿದ್ದಂತೆ ಹಿಂದೂ ಯುವಕರ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎನ್ನಲಾಗುತ್ತಿದೆ.
ಅಂದು ನಡೆದಿದ್ದೇನು!?
ಮುಸ್ಲಿಮರ ಅಂಗಡಿ ಮುಂಗಟ್ಟುಗಳು ಬಂದ್ ದಿನ ಸಂಸ್ಥೆಯ ಮಾಲೀಕ ಸಿಬ್ಬಂದಿಗಳಿಗೆ ರಜೆ ನೀಡಿರಲಿಲ್ಲ, ಹಾಗೂ ಕೆಲಸಕ್ಕೆ ಕರೆಸಿಕೊಂಡಿದ್ದರು. ಅರ್ಧ ಬಾಗಿಲು ತೆರೆದು ಕೆಲಸ ನಿರ್ವಹಿಸಿ ಎಂದು ಮಾಲೀಕ ಆಜ್ಞೆ ಮಾಡಿ ಎಲ್ಲೋ ಹೋಗಿದ್ದಾಗ ಅಲ್ಲಿನ ಇನ್ನೊರ್ವ ಸಿಬ್ಬಂದಿ ಮುಸ್ಲಿಂ ಯುವತಿ ಹಿಂದೂ ಯುವಕರಿಗೆ ಕೆಲಸ ಮಾಡದಂತೆ ಒತ್ತಡ ಹೇರಿದ್ದಾಳೆ ಎನ್ನಲಾಗಿದೆ.
Angadiya ಶಟರ್ ಅನ್ನು ಪೂರ್ತಿ ತೆರೆಯಲು ಹೇಳಿದವರು ಯಾರು ಎಂದು ಪ್ರಶ್ನಿಸಿದ್ದು,ಈ ಬಗ್ಗೆ ಮಾತಿಗೆ ಮಾತು ಬೆಳೆದು ಯುವಕರು ಮನೆ ಕಡೆಗೆ ಹೆಜ್ಜೆ ಹಾಕಿದ್ದರು. ಆಗ ಆ ವಿಷಯ ಮಾಲೀಕರ ಗಮನಕ್ಕೂ ತಂದಿದ್ದರು. ಆದರೆ ಮಾಲೀಕ ತನ್ನ ಸಮುದಾಯದ ಯುವತಿಯ ಬೆನ್ನಿಗೆ ನಿಂತು ಹಿಂದೂ ಯುವಕರದ್ದೇ ತಪ್ಪು ಎಂಬಂತೆ ಬಿಂಬಿಸಿದ್ದು, ಮಾರನೆಯ ದಿನದಿಂದ ಕೆಲಸಕ್ಕೆ ಬರಬೇಡಿ ಎಂದು ತಿಳಿಸಿದ್ದರು ಎನ್ನಲಾಗಿದೆ.
ಇತ್ತ ಮುಸ್ಲಿಂ ಮಾಲೀಕನ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸಂಸ್ಥೆಯ ಮಾಲೀಕ ಸಮಜಾಯಿಷಿ ನೀಡಿದ್ದು, ಹಿಂದೂ ಯುವಕರು ಮದ್ಯ ಸೇವಿಸಿ ಬಂದಿದ್ದರು, ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದೇನೆ. ಇದರಲ್ಲಿ ಬೇರೆ ಯಾವುದೇ ವಿಚಾರ ಇಲ್ಲ ಎಂದು ಸುಳ್ಳು ಕಥೆ ಹೆಣೆಯಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಘಟನೆ ನಡೆದ ದಿನ ಅಲ್ಲಿ ಏನಾಗಿತ್ತು ಎನ್ನುವ ಎಲ್ಲಾ ವಿವರಗಳನ್ನು ಯುವಕರು ನೀಡಿದ್ದು, ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಆಮಿಷಕ್ಕೆ ಬಲಿಯಾಗದೆ ಸುಳ್ಳು ಸುದ್ದಿ ಹಬ್ಬಿಸದಿರಲು ಕ್ರಮ ಕೈಗೊಳ್ಳಬೇಕಾಗಿದೆ. ಇದೀಗ ಮಾಲೀಕರ ಕಡೆಯಿಂದ ಸಂಜಾಯಿಷಿ ಬಂದಿದ್ದು, ಆತ ಹಿಂದೂ ಮುಸ್ಲಿಮ್ ಬ್ರಾತ್ರುತ್ವದ ಬಗ್ಗೆ ಮಾತಾಡ್ತಾೆ ಇದ್ದಾರೆ. ಒಳ್ಳೆಯದೇ. ಆದ್ರೆ ಜನರಿಗೆ ಸತ್ಯ ತಿಳಿಯಬೇಕಿದೆ. ಈ ಮದ್ಯೆ ಹೇಳಿಕೆ ನೀಡಿರುವ ಮಾಲೀಕ, ಇದರಲ್ಲಿ ಯಾವುದೆ ಹಿಂದೂ ಸಮುದಾಯದ ಪಾಲುದಾರಿಕೆ ಇಲ್ಲ. ಬೆಳ್ತಂಗಡಿಯ ನನ್ನ ವೃತ್ತಿಯ ವೈರಿಗಳು ನನ್ನ ಮೇಲೆ ವಿನಾ ಕಾರಣ ಮಸಲತ್ತು ಮಾಡುತ್ತಿದ್ದಾರೆ. ಅವರ ಮೂಲಕ ಈ ಮ್ಯಾಟರ್ ವೈರಲ್ ಆಗ್ತಿರೋದು, ಬೇರೇನೂ ಅಲ್ಲ, ಎಂದಿದ್ದಾರೆ. ಬಹುಶಃ ನಾಳೆಯ ಹೊತ್ತಿಗೆ ಇನ್ನಷ್ಟು ಮಾಹಿತಿ ಬರಲಿದೆ.