ನಾನು MLA ಮೊಮ್ಮಗ ಎಂದು ಬೈಕ್ ಗೆ ನಂಬರ್ ಪ್ಲೇಟ್ ಹಾಕಿಸಿಕೊಂಡ ಯುವಕ !! | ವೈರಲ್ ಆಗಿದೆ ಈ ಬುಲೆಟ್ ಬಸ್ಯನ ಖದರ್ ಫೋಟೋ

ರಸ್ತೆ ಸಾರಿಗೆ ನಿಗಮದ ಪ್ರಕಾರ ಎಲ್ಲಾ ವಾಹನಗಳಿಗೂ ನಂಬರ್ ಪ್ಲೇಟ್ ಕಡ್ಡಾಯ. ನಂಬರ್ ಪ್ಲೇಟ್ ಇಲ್ಲದೆ ವಾಹನಗಳು ರಸ್ತೆಗೆ ಇಳಿಯಲೇಬಾರದು. ಹೀಗಿರುವಾಗ ತಮಿಳುನಾಡು ಶಾಸಕರೊಬ್ಬರ ಮೊಮ್ಮಗ ಎಂದು ಹೇಳಿಕೊಳ್ಳುತ್ತಾ, ‘Grandson of Nagercoil MLA MR Gandhi’ ಎಂದು ಬೈಕ್ ನಂಬರ್ ಪ್ಲೇಟ್ ಹಾಕುವ ಮೂಲಕ ಸುದ್ದಿಯಾಗಿದ್ದಾನೆ.

ನಾಗರಕೋಯಿಲ್ ಶಾಸಕ ಎಂ.ಆರ್.ಗಾಂಧಿ ಅವರ ಮೊಮ್ಮಗ ಎಂದು ನಂಬರ್ ಪ್ಲೇಟ್ ಬರೆದ ಬೈಕ್ ಮೇಲೆ ತಮಿಳುನಾಡಿನ ವ್ಯಕ್ತಿಯೊಬ್ಬ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರದ ದುರುಪಯೋಗವಾಗಿದೆ. ಇದು ಚಲನಚಿತ್ರ ಕಥೆಗಳನ್ನು ಮೀರಿಸುತ್ತದೆ. ‘ತೂ ಜಂತಾ ನಹೀ ಮೇರಾ ದಾದಾ ಕೌನ್ ಹೈ’ ನಂಬರ್ ಪ್ಲೇಟ್ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಎಂಆರ್ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಈ ಬೈಕ್ ಮೇಲೆ ಅಮರೀಶ್ ತಿರುಗುವುದು ಕಂಡು ಬಂದಿದೆ. ವಿಚಿತ್ರವೆಂದರೆ ಎಂ.ಆರ್.ಗಾಂಧಿ ಅವರು ಮದುವೆಯಾಗಿಲ್ಲವಂತೆ. ಹೀಗಿದ್ದರು ಮೊಮ್ಮಗ ಎಲ್ಲಿಂದ ಬಂದ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಚಿತ್ರದಲ್ಲಿರುವುದು ಶಾಸಕ ಗಾಂಧಿ ಅವರ ಸಹಾಯಕ ಕಣ್ಣನ್ ಅವರ ಪುತ್ರ ಎಂದು ತಿಳಿದು ಬಂದಿದೆ.

Leave A Reply