ಕೋಡಿಂಬಾಳ ಮಾಲೇಶ್ವರ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವರ್ಧಂತಿ ಮಹೋತ್ಸಕ್ಕೆ ಚಾಲನೆ-ಹೊರೆ ಕಾಣಿಕೆ ಸಮರ್ಪಣೆ
ಕಡಬ: ಕೋಡಿಂಬಾಳ ಗ್ರಾಮದ ಮಾಲೇಶ್ವರ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ 12ನೇ ವರ್ಧಂತಿ ಮಹೋತ್ಸವವು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಮತ್ತು ಬಾಳೆಹೊನ್ನೂರು ರಂಬಾಪುರಿ ಮಠದ ವೇದಮೂರ್ತಿ ಶ್ರೀ ಬಸವರಾಜಯ್ಯನವರ ನೇತೃತ್ವದಲ್ಲಿ ಮಾ.21ರಿಂದ ಮಾ.22ರವರೆಗೆ ನಡೆಯಲಿದ್ದು, ಮಾ.21ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ಹಾಗೂ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಆಳ್ವ ಬೆದ್ರಾಜೆ, ಆಡಳಿತ ಸಮಿತಿಯ ಅಧ್ಯಕ್ಷ ವಿಶ್ವೇಶ್ವರ ಭಟ್ ಎಲಿಯೂರು, ಪ್ರಧಾನ ಕಾರ್ಯದರ್ಶಿ ರಮೇಶ್ ರಾವ್ ಹೊಸಮನೆ, ಧಾ.ಉ.ಸ. ಉಪಾಧ್ಯಕ್ಷ ಲೋಕಯ್ಯ ಗೌಡ, ಕಾರ್ಯದರ್ಶಿ ಪ್ರದೀಪ್ ಜೈನ್, ಖಜಾಂಜಿ ಜಗದೀಶ್ ರೈ ಪಟ್ಟೆ, ಭಜನಾ ಮಂಡಳಿಯ ಅಧ್ಯಕ್ಷ ರಮೇಶ್ ರೈ ಅರ್ಪಾಜೆ, ಸದಸ್ಯರಾದ ಪದ್ಮಯ್ಯ ಪೂಜಾರಿ ಕುದುಂಬೂರು, ಉದಯ ರಾವ್ ನಾಲ್ಗುತ್ತು, ಅಶೋಕ್ ಹೆಗ್ಡೆ, ಹರೀಶ್ ಬೆದ್ರಾಜೆ, ಪುಷ್ಪಾವತಿ, ಸುಂದರ ಕೆ, ಪುರುಷೋತ್ತಮ ಕಲ್ಲಂತ್ತಡ್ಕ, ಪದ್ಮನಾಭ ಕಲ್ಲಂತಡ್ಕ ಪ್ರಮುಖರಾದ ಗೋಪಾಲ ಗೌಡ ಮುಳಿಯ, ಹೊನ್ನಪ್ಪ ಗೌಡ ಮುಳಿಯ, ಕುಶಾಲಪ್ಪ ಗೌಡ ಮುಳಿಯ, ಶ್ರೀಕಾಂತ್ ನಾಕ್ ಕುಕ್ಕೆರೆಬೆಟ್ಟು, ರಾಜೇಶ್ ನಾಕ್, ಅನಿಲ್ ಮಾಲೇಶ್ವರ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ತಿತರಿದ್ದರು. ಶ್ರೀ ಮಹಾಬಲೇಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್, ಶ್ರೀ ವೀರಭದ್ರ ದೇವಸ್ಥಾನದ ಅರ್ಚಕ ಸಿದ್ದಯ್ಯ ಹಿರೇಮಠ ಪೂಜಾ ವಿಧಿ ವಿಧಾನ ನೆರವೇರಿಸಿದರು.
ನಾಳೆ ಪ್ರತಿಷ್ಠಾ ಮಹೋತ್ಸವ
ಮಾ.22ರಂದು ಶ್ರೀ ಮಹಾಬಲೇಶ್ವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಶಂತಿ ಕಲಶಪೂಜೆ, ರುದ್ರಾಭಿಷೇಕ ಮಧ್ಯಾಹ್ನ ಶ್ರೀ ದೇವರಿಗೆ ಕಲಾಭಿಷೇಕ ಹಾಗೂ ನಾಗದೇವರಿಗೆ ಮತ್ತು ಇತರ ದೈವಗಳಿಗೆ ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ, ರಾತ್ರಿ ಮಹಾಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ನಡೆಯಲಿದೆ.
ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ
ಬೆಳಿಗ್ಗೆಯಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಶ್ರೀ ಗಣಪತಿ ಯಾಗ, ಶ್ರೀ ವೀರಭದ್ರ ಹವನ ರುದ್ರಾಭಿಷೇಕ, ಅಷ್ಟವಿಶಂತಿ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಭಜನಾ ಕಾರ್ಯಕ್ರಮ
12ನೇ ವರ್ಷದ ವರ್ಧಂತಿ ಮಹೋತ್ಸವದ ಅಂಗವಾಗಿ ಮಾ.22ರಂದು ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶ್ರೀ ದೇವಳದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ.