BMTC : 300 ಹುದ್ದೆಗಳು| SSLC ಮತ್ತು ITI ಪಾಸಾದವರಿಗೆ ಅವಕಾಶ | ಅರ್ಜಿಗೆ ಮಾರ್ಚ್ 30 ಕೊನೆಯ ದಿನಾಂಕ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಗತ್ಯ ಇರುವ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ( ಅಪ್ರೆಂಟಿಸ್) ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಮೆಕ್ಯಾನಿಕಲ್ ಡೀಸೆಲ್ : 250 ಹುದ್ದೆಗಳು.
ಫಿಟ್ಟರ್ – 50 ಹುದ್ದೆಗಳು.
ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿದ್ದಲ್ಲಿ 2 ವರ್ಷ, ಐ ಟಿಐ ತರಬೇತಿ ಹೊಂದಿದ್ದಲ್ಲಿ 1 ವರ್ಷದ ತರಬೇತಿ ಅವಧಿ ನಿಗದಿಪಡಿಸಲಾಗಿದೆ.
ವಯೋಮಿತಿ : ದಿನಾಂಕ 30-03-2022 ಕ್ಕೆ ಕನಿಷ್ಠ 16 ವರ್ಷ ತುಂಬಿರಬೇಕು. ಗರಿಷ್ಠ 26 ವರ್ಷ ಮೀರಿರಬಾರದು.
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಪಾಸ್ / ಐಟಿಐ (ಮೆಕಾನಿಕ್ ಡೀಸೆಲ್ ಹಾಗೂ ಫಿಟ್ಟರ್ ವೃತ್ತಿ) ಯಲ್ಲಿ ಉತ್ತೀರ್ಣರಾಗಿರಬೇಕು.
ಮಾಸಿಕ ತರಬೇತಿ ಭತ್ಯೆ :
ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂ.6000/-, ಐಟಿಐ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂ.7000/-
ಅರ್ಜಿ ಸಲ್ಲಿಸುವುದು ಹೇಗೆ ?
ಮೊದಲಿಗೆ ವೆಬ್‌ಸೈಟ್ www.apprenticeshipindia.gov.in ನಲ್ಲಿ ರಿಜಿಸ್ಟ್ರೇಷನ್ ಪಡೆದಿರಬೇಕು.
ನಂತರ ಆನ್‌ಲೈನ್ ಅರ್ಜಿಯ ಪ್ರತಿಯೊಂದಿಗೆ ಇತ್ತೀಚಿನ
02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳೊಂದಿಗೆ,
ಮೂಲ ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
ದಾಖಲೆಗಳ ಪರಿಶೀಲನೆ ದಿನಾಂಕ: 30-03-2022 ಸಮಯ : ಬೆಳಿಗ್ಗೆ 10-30 ಗಂಟೆಯಿಂದ 05-00 ಗಂಟೆವರೆಗೆ.
ಸಂದರ್ಶನಕ್ಕೆ ಹಾಜರಾಗಲು ಬೇಕಾಗುವ ಅಗತ್ಯ ದಾಖಲೆಗಳು : ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್,
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಐಟಿಐ ಪಾಸ್ ಸರ್ಟಿಫಿಕೇಟ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ, ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನ ವಿಳಾಸ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತರಬೇತಿ ಕೇಂದ್ರ, 2ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027