ಬೀದಿಬದಿ ಬಾಂಬೆ ಮಿಠಾಯಿ ವ್ಯಾಪಾರಿಯ ವ್ಯಾಪಾರದ ರೋಚಕ ಕಥೆ|ಹಣದ ಬದಲಿಗೆ ಈ ಒಂದು ವಸ್ತು ನೀಡಿದ್ರೆ ನಿಮ್ಮ ಪಾಲಾಗುತ್ತೆ ಕಾಟನ್​ ಕ್ಯಾಂಡಿ!!

ಸೋಷಿಯಲ್​ ಮೀಡಿಯಾ ಇರುವರೆಗೂ ವಿಷಯ ತಲುಪಲು ಏನು ಅಡ್ಡಿ ಇಲ್ಲ ಅಲ್ವಾ!? ಎಲ್ಲೆಲ್ಲೋ ನಡೆದಿರೋ ವಿಷಯಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ.ಅದೇ ರೀತಿ ಇಲ್ಲೊಂದು ಇಂಟೆರೆಸ್ಟಿಂಗ್ ಸ್ಟೋರಿ ವೈರಲ್ ಆಗಿದ್ದು, ನೋಡುಗರೇ ಆಶ್ಚರ್ಯ ಪಡುವಂತಿದೆ.

ಸಾಮಾನ್ಯವಾಗಿ ನಿಮಗೆಲ್ಲರಿಗೂ ವಸ್ತು ವಿನಿಮಯ ಪದ್ಧತಿ ಬಗ್ಗೆ ತಿಳಿದಿರುತ್ತೆ.ಈ ಹಣದ ಬದಲಿಗೆ ವಸ್ತುಗಳನ್ನು ನೀಡುವ ಪದ್ಧತಿ ಹಿಂದಿನ ಕಾಲದಲ್ಲಿ ಚಾಲ್ತಿಯಲ್ಲಿತ್ತು.ಅದೇ ರೀತಿಯ ಪದ್ಧತಿಯನ್ನು ಇಲ್ಲೊಬ್ಬ ಬೀದಿಬದಿ ವ್ಯಾಪಾರಿ ಕಂಡುಕೊಂಡಿದ್ದಾರೆ. ಆದರೆ ಈತನ ವಿನಿಮಯ ಪದ್ಧತಿ ತುಂಬ ವಿಭಿನ್ನವಾಗಿದೆ.ಆತನಿಗೆ ಇದೇ ವಸ್ತು ನೀಡಬೇಕೆಂಬ ಡಿಮ್ಯಾಂಡ್ ಇದೆ.

ನೀವೆಲ್ಲ ಕಾಟನ್​ ಕ್ಯಾಂಡಿ ಕೇಳಿರಬಹುದು. ಅದೇ ಬಾಂಬೆ ಮಿಠಾಯಿ. ಗುಲಾಬಿ ಬಣ್ಣದ ತಿನಿಸು. ಇದನ್ನು ಸಾಮಾನ್ಯವಾಗಿ ಬೀದಿಬದಿಯಲ್ಲೇ ಮಾರಾಟ ಮಾಡುತ್ತಾರೆ. ಹಾಗೆ ಇಲ್ಲೊಬ್ಬ ವ್ಯಾಪಾರಿ ಇದೇ ಬಾಂಬೆ ಮಿಠಾಯಿಯನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ವಿಶೇಷವೆಂದರೆ ಅವರು ಹಣ ಪಡೆಯುತ್ತಿಲ್ಲ, ಬದಲಿಗೆ ತಲೆ ಕೂದಲನ್ನು ಪಡೆದುಕೊಳ್ಳುತ್ತಿದ್ದಾರೆ !

ಅಂದಹಾಗೇ, ಈ ವ್ಯಾಪಾರಿಯ ಹೆಸರು ಪ್ರತಾಪ್​ ಸಿಂಗ್.ಅವರು ಇಂತಿಷ್ಟು ಪ್ರಮಾಣದ ಕೂದಲಿಗೆ, ಇಂತಿಷ್ಟು ಕಾಟನ್ ಕ್ಯಾಂಡಿ ಕೊಡುವುದಾಗಿ ಅಳತೆ ನಿಗದಿ ಮಾಡಿದ್ದಾರೆ.ರಸ್ತೆ ಬದಿಯಲ್ಲಿ ಒಂದು ಸಣ್ಣ ಅಂಗಡಿ ಇಟ್ಟುಕೊಂಡು ಅಲ್ಲಿ ಕಾಟನ್​ ಕ್ಯಾಂಡಿ ತಯಾರಿಸಿ ಕೊಡುತ್ತಾರೆ. ಪುಟ್ಟಪುಟ್ಟ ಮಕ್ಕಳು ಕೈಯಲ್ಲಿ ಸ್ವಲ್ಪ ಕೂದಲು ಹಿಡಿದುಕೊಂಡು ಆ ಅಂಗಡಿಯ ಎದುರು ನಿಂತು, ಬಾಂಬೆ ಮಿಠಾಯಿ ಪಡೆಯಲು ಕಾಯುತ್ತಾರೆ.

ಯೂಟ್ಯೂಬ್ ನಲ್ಲಿ ಇವರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು,ತುಂಬ ಜನರು ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡಲು ಕಾರಣವೇನು ಎಂಬುದಿನ್ನೂ ಸ್ಪಷ್ಟವಾಗಿಲ್ಲ, ಆದರೆ ಇದೊಂದು ವಿಭಿನ್ನ ವಿನಿಮಯ ಪದ್ಧತಿ ಎಂಬುದು ನೆಟ್ಟಿಗರ ಅಭಿಪ್ರಾಯ. ಬಹುಶಃ ಆ ಕೂದಲನ್ನು ಅವರೆಲ್ಲೋ ಮಾರಾಟ ಮಾಡುತ್ತಾರೆ ಎಂಬ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಕೂದಲಿನ ಚೌರಿ, ವಿಗ್​ ತಯಾರಿಕೆ ಮಾಡಲಾಗುತ್ತದೆ. ಹೀಗೆ ತಲೆಕೂದಲನ್ನು ಪಡೆದು ಅದಕ್ಕೆ ಪ್ರತಿಯಾಗಿ ದುಡ್ಡು ಕೊಡುವ ಸಾಕಷ್ಟು ಮಂದಿ ಇದ್ದಾರೆ. ಹಳ್ಳಿಯ ಕಡೆಗಳಲ್ಲೆಲ್ಲ ಮನೆಮನೆಗೆ ಬಂದು ಕತ್ತರಿಸಿದ ಕೂದಲನ್ನು ಸಂಗ್ರಹಿಸಿಟ್ಟರೆ ಅದನ್ನು ಪಡೆದು, ಬದಲಿಗೆ ಹಣವೋ ಪಾತ್ರೆಯೋ ನೀಡುತ್ತಾರೆ.

Leave A Reply

Your email address will not be published.