ವಾಹನ ಚಲಿಸುತ್ತಿರುವಾಗಲೇ ಕೈಚಳಕ ತೋರಿದ ಕಳ್ಳ !! | ಈ ಚಾಲಾಕಿ ಕಳ್ಳತನದ ದೃಶ್ಯ ಪ್ರಯಾಣಿಕರೊಬ್ಬರ ಮೊಬೈಲ್ ನಲ್ಲಿ ಸೆರೆ

ಕಳ್ಳತನದ ಫೀಲ್ಡ್ ಗೆ ಇಳಿಯುವವರು ಭಾರಿ ಖತರ್ನಾಕ್ ಆಗಿರುತ್ತಾರೆ. ನಾಜೂಕಾಗಿ ಯಾವ ರೀತಿಯಲ್ಲಿ ಕಳ್ಳತನ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಕಷ್ಟವೇ ಸರಿ. ಅಂತೆಯೇ ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಚಿತ್ರ ಕಳ್ಳತನದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳ್ಳತನದ ಆಘಾತಕಾರಿ ವೀಡಿಯೋ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕಳ್ಳತನದ ಈ ವೀಡಿಯೋ ಅಚ್ಚರಿ ಮೂಡಿಸುವುದಲ್ಲದೆ, ತುಂಬಾ ತಮಾಷೆಯಾಗಿ ಕೂಡ ಇದೆ. ಕಳ್ಳತನ ಮಾಡಲು ಕಳ್ಳನು ಅನುಸರಿಸಿದ ವಿಧಾನವನ್ನು ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ. ಈ ವೀಡಿಯೋದಲ್ಲಿ ಸರಕುಗಳಿಂದ ತುಂಬಿರುವ ವಾಹನವೊಂದು ರಸ್ತೆಯ ಮೇಲೆ ಚಲಿಸುತ್ತಿದೆ. ಚಲಿಸುತ್ತಿರುವ ವಾಹನದಿಂದ ಯಾರು ಕಳ್ಳತನ ಮಾಡುತ್ತಾರೆ ?? ಆದರೆ, ಈ ವೀಡಿಯೋದಲ್ಲಿ ಅದು ನಡೆದೇ ಹೋಗಿದೆ.
ಹೌದು. ವೀಡಿಯೋದಲ್ಲಿ ಸರಕು ತುಂಬಿದ ವಾಹನ ರಸ್ತೆಯ ಮೇಲೆ ಚಲಿಸುತ್ತಿದ್ದು, ಬೈಕ್ ನಲ್ಲಿ ಆ ವಾಹನವನ್ನು ಇಬ್ಬರು ಹಿಂಬಾಲಿಸುತ್ತಿರುವುದನ್ನು ನೀವು ನೋಡಬಹುದು. ಅಷ್ಟೊತ್ತಿಗೆ ಚಲಿಸುತ್ತಿರುವ ಬೈಕ್ ನಿಂದ ವ್ಯಕ್ತಿಯೊಬ್ಬ ಆ ವಾಹನವನ್ನು ಹತ್ತುತ್ತಾನೆ ಮತ್ತು ವಾಹನದಿಂದ ಸರಕುಗಳನ್ನು ತೆಗೆದು, ವಾಹನವನ್ನು ಹಿಂಬಾಲಿಸುತ್ತಿರುವ ಬೈಕ್ ಮೇಲಿರುವ ವ್ಯಕ್ತಿ ಕೈಗೆ ಕೊಡುತ್ತಾನೆ. ಇನ್ನೂ ಬೈಕ್ ಹಿಂದಿನಿಂದ ಚಲಿಸುತ್ತಿರುವ ಕಾರು ಚಾಲಕನೊಬ್ಬ ಈ ಕಳ್ಳತನದ ವೀಡಿಯೋ ಶೂಟ್ ಮಾಡಿದ್ದಾನೆ. ಯಾವುದೇ ರೀತಿಯ ಭೀತಿ ಇಲ್ಲದ ಕಳ್ಳರನ್ನು ಆತ ಹಿಂದೆಂದೂ ನೋಡಿರಲಿಕ್ಕಿಲ್ಲ.
ರಸ್ತೆಯ ಮೇಲೆ ಚಲಿಸುತ್ತಿರುವ ವಾಹನದಿಂದ ಸರಕನ್ನು ಹಾರಿಸುವುದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಪ್ರಸ್ತುತ ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ ಎಂಬುದು ಮಾತ್ರ ಗೊತ್ತಾಗಿಲ್ಲ. ಈ ವೀಡಿಯೋವನ್ನು swami_7773 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿರುವ ಈ ವೀಡಿಯೋಗೆ 50 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ.