ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರ ಧ್ವಜವಾಗಬಹುದು- ಡಾ.ಕಲ್ಲಡ್ಕ ಪ್ರಭಾಕರ ಭಟ್
ಮಂಗಳೂರು: ‘ಮುಂದೊಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗಬಹುದು’ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಕರಾವಳಿಯ ಕಾರ್ನಿಕ ದೈವ ಕೊರಗಜ್ಜ ಕ್ಷೇತ್ರದ ಕಡೆ ಭಕ್ತರ ನಡಿಗೆ ಎಂಬ ಹೆಸರಿನಲ್ಲಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ಸಿನ ತುಷ್ಟಿಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗಬಹುದು ,ಈಗ ಇರುವ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು ಎಂಬ ಬಗ್ಗೆ ವಿವರಿಸಿದರು. ಮೊದಲು ಬ್ರಿಟಿಷರ ಧ್ವಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಬಹುಮತ ಪಡೆದರೆ ಧ್ವಜ ಬದಲು ಮಾಡಬಹುದು. ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ. ಹೀಗೆಯೇ ಮುಂದುವರೆದರೆ ಹಿಂದೂ ಸಮಾಜ ಒಟ್ಟಾಗುತ್ತೆ ಎಂದರು.
ಇವತ್ತು ಕಾಶ್ಮೀರ ಫೈಲ್ಸ್ ಸಿನೆಮಾದಲ್ಲಿ ನೀವು ನೋಡೋದು ಸಣ್ಣ ತುಣುಕು ಅಷ್ಟೇ. ದೇಶದಲ್ಲಿ ಧರ್ಮದ ಹತ್ಯೆ ಆದಾಗಲೂ ಷಂಡ ಕಾಂಗ್ರೆಸ್ ಒಪ್ಪಿಕೊಂಡಿತು. ಇವತ್ತು ಅದೇ ರೀತಿ ಹಿಜಾಬ್ ಬಂದಿದೆ, ಕಿತಾಬ್ ಬೇಡ ಎಂದರು.
ಎಲ್ಲಾ ವ್ಯವಸ್ಥೆ ಕೊಟ್ಟರೂ ನಾವು ಪ್ರತ್ಯೇಕವಾದಿ ಅನ್ನೋ ಮನೋಭಾವ ಇದೆ. ಇದು ಈ ದೇಶವನ್ನು ಮುಂದೆ ತುಂಡು ಮಾಡುವ ಪ್ರಯತ್ನ ಎಂದರು.