ಕೋವಿಶೀಲ್ಡ್ ಲಸಿಕೆಯ ‘2 ಡೋಸ್’ಗಳ ನಡುವಿನ ಅಂತರ ಇಳಿಕೆ | 12-16 ರಿಂದ 8-16 ವಾರಗಳಿಗೆ ಇಳಿಕೆ !
ನವದೆಹಲಿ ಕೋವಿಡ್ -19 ಲಸಿಕೆ ಕೋವಿಶೀಲ್ಡ್ನ ಎರಡನೇ ಡೋಸ್’ನ್ನು ಮೊದಲ ಡೋಸ್ ಪಡೆದ ನಂತರ 8 ರಿಂದ 16 ವಾರಗಳ ನಡುವೆ ನೀಡಲು ಭಾರತದ ಅತ್ಯುನ್ನತ ಸಂಸ್ಥೆ ಎನ್ನಿಎಜಿಐ (NTAGI) ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಇನ್ನು ಮೊದಲ ಡೋಸ್ ಪಡೆದ 28 ದಿನಗಳ ನಂತ್ರ ಎರಡನೇ ಡೋಸ್ ನೀಡುವ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎಸ್ಟಿಎಜಿಐ) ಇನ್ನೂ ಸೂಚಿಸಿಲ್ಲ. ರಾಷ್ಟ್ರೀಯ ಕೋವಿಡ್ -19 ಲಸಿಕಾ ಕಾರ್ಯಕ್ರಮದಲ್ಲಿ ಕೋವಿಶೀಲ್ಡ್ ನ ಶಿಫಾರಸು ಇನ್ನೂ ಜಾರಿಗೆ ಬಂದಿಲ್ಲ. ‘ಎನ್ವಿಎಜಿಐನ ಇತ್ತೀಚಿನ ಶಿಫಾರಸು ಪ್ರೋಗ್ರಾಮ್ಯಾಟಿಕ್ ಡೇಟಾದಿಂದ ಪಡೆದ ಇತ್ತೀಚಿನ ಜಾಗತಿಕ ವೈಜ್ಞಾನಿಕ ಪುರಾವೆಗಳನ್ನ ಆಧರಿಸಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಅದರ ಪ್ರಕಾರ, ಕೋವಿಶೀಲ್ಡ್’ನ ಎರಡನೇ ಡೋಸ್’ನ್ನ ಎಂಟು ವಾರಗಳ ನಂತರ ನೀಡಿದಾಗ, 12 ರಿಂದ 16 ವಾರಗಳ ಅಂತರದಲ್ಲಿ ನೀಡಿದಾಗ ಉತ್ಪತ್ತಿಯಾದ ಪ್ರತಿಕಾಯ ಪ್ರತಿಕ್ರಿಯೆಯು ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ’ ಎಂದು ಮೂಲಗಳು ವಿವರಿಸಿವೆ.