ದಿಕ್ಕು ತಪ್ಪಿಸಿದ ಗೂಗಲ್ : ದಿಕ್ಕು ತೋಚದೆ ನಿಂತ ಲಕ್ಷಾಂತರ ಜನ
ಮುಂಚೆ ಎಷ್ಟೊ ವರ್ಷದ ಹಿಂದೆ ಹೊಸ ಜಾಗಕ್ಕೆ ಹೋಗುವಾಗ ಜನರನ್ನು ಕೇಳಿ ಹೋಗಬೇಕಿತ್ತು. ನಿರ್ಜನ ಪ್ರದೇಶವಾದರೆ ಪರದಾಡಬೇಕಿತ್ತು ಆದರೆ ಈಗ ನಾವು ಎತ್ತ ಸಾಗುವುದಿದ್ದರೂ ಗೂಗಲ್ ಮ್ಯಾಪ್ವಮೊರೆಹೋಗುತ್ತೇವೆ. ಗೂಗಲ್ ಮ್ಯಾಪೇ ನಮ್ಮ ಮಾರ್ಗದರ್ಶಕನಾಗಿರುತ್ತಾನೆ .ಗೂಗಲ್ ನಿಖರವಾದ ಜಾಗಕ್ಕೆ ತಲುಪಿಸುತ್ತದೆ . ಆದರೆ ನಿನ್ನೆ ಗೂಗಲೆ ಜನರ ದಿಕ್ಕು ತಪ್ಪಿಸಿದೆ. ಒಂದು ಕ್ಷಣ ಲಕ್ಷಾಂತರ ಜನ ಕಂಗಾಲಾಗಿದ್ದಾರೆ !
ನ್ಯಾವಿಗೇಟ್ ಮಾಡಲು ಪ್ರಪಂಚದ ಹೆಚ್ಚಿನವರು Google ನಕ್ಷೆಗಳನ್ನು ಬಳಸುತ್ತಿರುವುದರಿಂದ, ಅಪ್ಲಿಕೇಶನ್ ನ ಸಮಸ್ಯೆಯಿಂದಾಗಿ ಪ್ರಪಂಚದಾದ್ಯಂತದ ಜನರಿಗೆ ದಿನನಿತ್ಯದ ಪ್ರಯಾಣದಲ್ಲಿ ದಿಕ್ಕು ದೋಚದಂತಾಗಿತ್ತು. ನಿನ್ನೆ ಲಕ್ಷಾಂತರ ಜನ ಇದ್ದಕ್ಕಿದ್ದಂತೆ ಅಪ್ಲಿಕೇಶನ್‌ನಲ್ಲಿ ನಕ್ಷೆಯನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ.
Google Maps ವೆಬ್ ಸೈಟ್ ಗೆ ಪ್ರವೇಶಿಸಲು ಪ್ರಯತ್ನಿಸಿದವರಲ್ಲಿ ಹೆಚ್ಚಿನವರಿಗೆ ‘ಸರ್ವರ್ ದೋಷ ಉಂಟಾಗಿದ್ದು, ಪ್ರಯಾಣಿಕರು, ಪ್ರಯಾಣಕ್ಕೆ ಸಿದ್ದವಾದವರು ದಿಕ್ಕು ತೋಚದೆ ನಿರಾಶೆಗೆ ಒಳಗಾಗಿದ್ದರು.